Friday, 30 December 2011

ರಾಜಕಾರಣಿಯ ಹುಯಿಲುಪಾಪ ಇಂದಿನ ರಾಜಕಾರಣಿಗಳ ಪರಿಸ್ಥಿತಿ ಹೀಗಿರಬಹುದೇನೋ 
 ಕುನ್ನಿ ನಾನು ಕುಬ್ಜ ನಾನು 
ಮೇಲಕ್ಕೆನ್ನ ಏರಿಸಿಹರು 
ಇಳಿಯಲಾರೆ ಭಯವೆನಗೆ 
ಧುಮುಕಿದರೆ ಮುರಿಯುವುದು ಕಾಲೆನಗೆ.

ನಾನಿರುವಲ್ಲೇ ಹುಡುಕುವೆನು
ಇಲ್ಲೇ ಸಿಗುವ ಆಹಾರವನು
ತಿನ್ನಲೋ ನೆಕ್ಕಲೋ
ಏನು ಸಿಕ್ಕರೂ ಸಾಕೆನುವೆನು.

ಎಲ್ಲೋ ಇದ್ದ ನನ್ನ ತಂದು
ಎತ್ತರದಲ್ಲಿ ಕುಳ್ಳಿರಿಸಿಹರು
ಅರ್ಹನೋ ಅನರ್ಹನೋ
ಅರಿಯದೆಯೇ ಬಾಲ ಆಡಿಸಿಹೆನು

ಕಂಡ ಕಂಡವರ ಮೇಲೆ
ಬೊಗಳಿ ಕೂಗಾಡುವೆನು
ಭ್ರಮೆಯಲ್ಲಿ ಈ ಜಗಕೆ
ರಾಜ ನಾನೆ೦ದೆಣಿಸಿಹೆನು

ಎಂದು ಇಳಿಸುವರೋ ಅರಿಯೆ
ಎಲ್ಲಿ ತಳ್ಳುವರೋ ಅರಿಯೆ
ಪರದ ಅಪ್ಪನ ಅಗ್ರ ಹಾರಕೋ
ಪರಲೋಕದಪ್ಪನ ತಾಣಕ್ಕೋ


ರವಿ ತಿರುಮಲೈ 

1 comment: