Thursday 29 December 2011

ಬಾ ರವಿಯೇ ಬಾ ಸೂರ್ಯ





ಸಪ್ತ ಹಯದ ರಥ ಸಾರಥ್ಯಕೆ 
ಕರೆದು ಗರುಡಾಗ್ರಜನನು  
ಜಗವ ಬೆಳಗಲು ಹೊರಟು
ಹಿಂತಿರುಗಿ ಹೋಗುವನ
ಪರಿ ನೋಡಲತಿಚೆಂದ   

ಮನದಲೆಲ್ಲರ ಒಳಗೆ 
ಬದುಕುವಾಸೆ ಉದ್ದೀಪಿಸಿ 
ಶಕ್ತಿ ನೀಡಿ ಚುರುಕಾಗಿಸಿ 
ಜಗದ ಹುದ್ದರಿಯಂತೆ 
ನಡೆವನ ಪರಿ ನೋಡಲತಿಚೆಂದ 

ಲೋಕಸಾಕ್ಷಿಯವನು, ತನ್ನೊಳ್ಳಗೆ
ಎಲ್ಲರ ಲೆಕ್ಕವನು ಬರೆದು ಇಟ್ಟಿರುವವನು 
ಕಾಲನವನು ಅವ್ಯಾಹತ ಓಡುವವನು  
ಮತ್ತೊಂದು ದಿವಸಕ್ಕೋ, ಜನ್ಮಕ್ಕೋ 
ಕೊಂಡುಹೋಗುವವನ ಪರಿ ನೋಡಲತಿಚೆಂದ.  

ಪ್ರಾಣಕ್ಕೆ ಪ್ರಾಣ ಜೀವಕ್ಕೆ ಜೀವವಾಗಿ 
ಜೀವಿಗಳ ಜೀವನಕೆ ಹೇತುವಾಗಿ  
ಸಸಿ ಮರಗಳಿಗೆ ಪ್ರಾಣಿ ಪಕ್ಷಿಗಳಿಗೆ 
ಚೇತನವು ತಾನಾಗಿ, ಮತ್ತೆ ಮತ್ತೆ 
ಬಂದು  ಹೋಗುವವನ ಪರಿ ನೋಡಲತಿಚೆಂದ. 

ಬಾ ರವಿಯೇ ಬಾ ಸೂರ್ಯ, ಮತ್ತೆ 
ಜಗವ ಬೆಳಗಲು ಬಾ, ಮನವ ಬೆಳಗಲು ಬಾ 
ಕಾಯುವುದು ಜಗವೆಲ್ಲ, ಕನಸ ಕಾಣುತ್ತ ಇರುಳೆಲ್ಲ 
ಬಾಳೆಲ್ಲ ಬೆಳಗಲು ಬದುಕನ್ನು ನಡೆಸಲು 
ಬೆಳಕ ರೂಪದಿ ಸಂಗವಿದ್ದರೆ ನೀ ಬಾಳೆಲ್ಲ ಚೆಂದ 

ರವಿ ತಿರುಮಲೈ 



2 comments:

  1. ಅದ್ಬುತ ಕವಿತೆ. ತುಂಬಾ ಸುಂದರವಾಗಿದೆ. ನಾನು ಕ್ಲಿಕ್ಕಿಸಿದ ಈ ಚಿತ್ರದ ಸೌಂದರ್ಯ ಈಗಷ್ಟೇ ಸಂಪೂರ್ಣವಾಯಿತು. ಧನ್ಯವಾದಗಳು.
    ಹೆಚ್ಚಿನ ಚಿತ್ರಗಳು: http://www.facebook.com/media/set/?set=a.314565098576831.80856.100000700301211&type=1

    ReplyDelete
  2. ಸೊಗಸಾದ ವರ್ಣನೆ ಭುವಿಯ ಬೆಳಗುವ ಆ ಭಾಸ್ಕರನ ಚೆಲುವ...ಸೂಪರ್ ಗುರುಗಳೆ

    ReplyDelete