Wednesday 28 December 2011

ಶ್ರೇಷ್ಠ ಭಗವಧ್ಭಕ್ತನ ಲಕ್ಷಣ

ಮಿತ್ರರೇ ನೀವು ಪರಮಾತ್ಮನಲ್ಲಿ ನಂಬಿಕೆ ಇಟ್ಟಿದ್ದೀರಾ? 
ಅವನ ಕಲ್ಯಾಣ ಗುಣಗಳಿಂದಲೇ ಈ ಜಗದ್ವ್ಯಾಪಾರ ನಡೆಯುತ್ತದೆಂದು ನಂಬಿದ್ದೀರಾ? 

ಹಾಗಾದರೆ ಶ್ರೇಷ್ಠ ಭಗವಧ್ಭಕ್ತನ ಲಕ್ಷಣಗಳೇನು ಎಂಬುದನ್ನು ನೋಡೋಣ!!!!

ಯೇ ಹಿತಾಃ  ಸರ್ವಜ೦ತೂನಾಮ್  ಗತಾಸೂಯಾ  ಅಮತ್ಸರಾ  
ವಶಿನೋ ನಿಸ್ಪ್ರುಹಃ ಶಾಂತಸ್ತೇವೈ ಭಾಗವತೋತ್ತಮಾಃ '೧' 
ಯಾರು ಎಲ್ಲಾ ಜೀವಿಗಳ ಹಿತವನ್ನೇ ಬಯಸುತ್ತಾರೋ, ಅಸೂಯೆ, ಮತ್ಸರರಹಿತರೋ 
ಇಂದ್ರಿಯಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿರುವರೋ,ನಿಸ್ಪ್ರುಹರೋ,ಶಾಂತರೋ ಅವರೇ ಉತ್ತಮ ಭಗವದ್ಭಕ್ತರು

ಕರ್ಮಣಾ ಮನಸಾ ವಾಚಾ ಪರಪೀಡಾಂ ನ ಕುರ್ವತೆ 
ಅಪರಿಗ್ರಹಾಶೀಲಾಸ್ಚ ತೇ ವೈ ಭಾಗವತಾಃ ಸ್ಮೃತಾಃ '೨' 
ಕಾಯಾ ವಾಚಾ ಮನಸಾ ಯಾರು ಪರರನ್ನು ಪೀಡಿಸುವುದಿಲ್ಲವೋ ಪರರಿಂದ 
ಏನನ್ನೂ ಪಡೆದುಕೊಳ್ಳುವುದಿಲ್ಲವೋ(ಗುಣವೊಂದನ್ನುಬಿಟ್ಟು)ಅವರನ್ನೇ ಉತ್ತಮ ಭಗವದ್ಭಕ್ತರೆಂದು ತಿಳಿಯಬೇಕು

ಸತ್ಕಥಾಶ್ರವಣೆ ಯೇಷಾಂ ವರ್ತತೆ ಸಾತ್ವಕೀ ಮತಿ:
ತತ್ಭಕ್ತ ವಿಷ್ಣುಭಕ್ತಾಸ್ಚ  ತೇವೈ ಭಾಗವತೋತ್ತಮಾಃ  '೩ 
ಯಾರ ಮನಸ್ಸು ಭಗವಂತನನ್ನು ಕುರಿತಾದ ಸತ್ಕಥೆಗಳನ್ನೇ ಕೇಳಲಿಚ್ಚಿಸುತ್ತವೆಯೋ 
ಅಂತಹವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.  

ಮಾತಾಪಿತ್ರೋಸ್ಚ ಶುಶ್ರೂಷಾಂ ಕುರ್ವಂತಿ ಯೇ ನರೋತ್ತಮಾಃ
ಗಂಗಾವಿಶ್ವೇಶ್ವರಧಿಯಾ ತೇವೈ ಭಾಗವತೋತ್ತಮಾಃ  '೪ ' 
ತಂದೆ ತಾಯಿಗಳ ಸೇವೆಯನ್ನು ಪಾರ್ವತೀ ಪರಮೇಶ್ವರರ ಪೂಜೆಯಂದರಿತು
ಯಾರು ಮಾಡುವರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ವ್ರತೀನಾಂ ಚ ಯತೀನಾಂ ಚ ಪರಿಚರ್ಯಾಸ್ಚ ಯೇ 
ವಿಯುಕ್ತ ಪರನಿದಾ೦ಸ್ಚ ತೇವೈ ಭಾಗವತೋತ್ತಮಾಃ"೫" 
ವ್ರತ ನಿರತರನ್ನು ಮತ್ತು ಯತಿಗಳ ಪರಿಚರ್ಯಯೆನ್ನು ಯಾರು ಮಾಡುತ್ತಾರೋ ಮತ್ತು 
ಪರನಿಂದೆಯನ್ನು ಯಾರು ಮಾಡುವುದಿಲ್ಲವೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ಸರ್ವೇಷಾಂ ಹಿತವಾಕ್ಯಾನಿ ಯೇ ವದಂತಿ ನರೋತ್ತಮಾಃ 
ಯೇ ಗುಣಗ್ರಾಹಿಣೋ ಲೋಕೆ ತೇ ವೈ ಭಾಗವತಾಃ ಸ್ಮೃತಾಃ "೬"
ಎಲ್ಲರಲ್ಲೂ ಯಾರು ಹಿತವಾಕ್ಯಗಳನ್ನೇ ನುಡಿಯುತ್ತಾರೋ ಮತ್ತು ಈ ಲೋಕದಲ್ಲಿ ಅವಗುಣಗಳನ್ನು ಬಿಟ್ಟು
ಗುಣಗಳನ್ನೇ  ಗ್ರಹಿಸುತ್ತಾರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ಆತ್ಮವತ್ ಸರ್ವಭೂತಾನಿ ಯೇ ಪಶ್ಯಂತಿ ನರೋತ್ತಮಾಃ 
ತುಲ್ಯಾ ಶತ್ರುಷು ಮಿತ್ರೇಷು  ತೇವೈ ಭಾಗವತೋತ್ತಮಾಃ"೭" 
ಎಲ್ಲ ಜೀವಿಗಳನ್ನೂ ತನ್ನಂತೆ ಯಾರು ತಿಳಿಯುತ್ತಾರೋ ಮತ್ತು ಶತ್ರುವಿನಲ್ಲೂ 
ಮಿತ್ರನಲ್ಲೂ ಸಮಭಾವದಿಂದಿರುವರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ಅನ್ಯೇಶಾಂ ಉದಯಂ ದೃಷ್ಟ್ವಾ ಯೇsಅಭಿನಂದಂತಿ ಮಾನವಾಃ  
ಹರಿನಾಮಪರಾ ಯೇ ಚ ತೇವೈ ಭಾಗವತೋತ್ತಮಾಃ"೮" 
ಪರರ ಅಭ್ಯುದಯವನ್ನು ಕಂಡು ಯಾರೋ ಕರುಬದೆ ಸಂತೋಷಪಡುತ್ತಾರೋ, ಯಾರು 
ಸದಾ ಹರಿನಾಮ ಸ್ಮರಣೆಯಲ್ಲೇ ನಿರತರೋ ಅವರೇ ನಿಜವಾದ ಭಗವದ್ಭಕ್ತರು. 

ಶಿವೇ ಚ ಪರಮೇಶೇಚ ವಿಷ್ಣೌ ಚ ಪರಮಾತ್ಮನಿ 
ಸಮಭುಧ್ಯಾ ಪ್ರವರ್ತಂತೆ ತೇ ವೈ ಭಾಗವತಾಃ ಸ್ಮೃತಾ "೯" 
ಶಿವ ಮತ್ತು ವಿಷ್ಣು ಎಂಬ ಬೇಧಭಾವವಿಲ್ಲದೆ, ಎರಡೂ ರೂಪದಲ್ಲೂ 
ಸಮಭಾವ, ಸಮಬುಧ್ಧಿಯಿಂದ ಯಾರು ಪ್ರವರ್ತಿಸುತ್ತಾರೋ ಅವರೇ ನಿಜವಾದ ಭಗವದ್ಭಕ್ತರು.
 
ಮಿತ್ರರೇ ಎಲ್ಲರಲ್ಲೂ ಭಕ್ತಿಯಂಬುದು ಇರುತ್ತೆ. ಪ್ರಮಾಣ ಮತ್ತು ಉತ್ಕಟತೆ ಭಿನ್ನ ಭಿನ್ನವಾಗಿರುತ್ತದೆ. 
ಇಲ್ಲಿ  ನಾವೆಲ್ಲರೂ ಆತ್ಮಾವಲೋಕನಮಾಡಿಕೊಂಡು ಮೇಲೆ ಹೇಳಿದ ಗುಣಗಳಿದ್ದರೆ,ವೃಧ್ಧಿಮಾಡಿಕೊಳ್ಳಬೇಕು, 
ಇಲ್ಲದಿದ್ದರೆ ಬೆಳೆಸಿಕೊಳ್ಳಬೇಕು. ಬನ್ನಿ ನಾವೆಲ್ಲಾ ನಮ್ಮನ್ನು ನಾವೇ ಉದ್ಹ್ಧರಿಸಿಕೊಳ್ಳೋಣ.
ಸರ್ವೇ ಜನಾಃ ಸಜ್ಜನೋ ಭವಂತು
ಸರ್ವೇ ಸಜ್ಜನಾಃ ಸುಖಿನಃ ಸಂತು

ರವಿ ತಿರುಮಲೈ
96322 46255

No comments:

Post a Comment