Sunday 4 December 2011

ಕರುಣೆಯಾ ತೋರೆಯಾ

                            

  ಕರುಣೆಯಾ ತೋರೆಯಾ



ಹಸಿರು ಹುಲ್ಲ ಮೇಯುವ ಹುಲ್ಲೆ ನಾ 

ಎನ್ನ ಸೊಲ್ಲಡಗಿ ಶರಣಾಗಿಹೆನು ನಾ 

ಇಬ್ಬರಿದಿರು ಒಬ್ಬನೇನು ಮಾಡಬಲ್ಲೆ.

ಕರುಣೆಯಿಂದ ಬಿಟ್ಟರೆ ನಾ ಚಂಗನೋಡಬಲ್ಲೆ 


ಕಾಯುತಿಹರು ಎನ್ನಮ್ಮ ಅಕ್ಕ ತಂಗಿಯರು

ಹಿಂಡಲ್ಲೆನ್ನ ಕಾತರದಿ ಇದಿರು ನೋಡುತಿಹರು

ಹೋದರೆ ನಾ ಅವರಿಗೆ ಸಂತಸವೆಂದು ಬಲ್ಲೆ

ಕರುಣೆಯಿಂದ ಬಿಟ್ಟರೆ ನಾ ಚಂಗನೋಡಬಲ್ಲೆ 


 ನೋಡಲೇನೋ ಪ್ರೀತಿ ತೋರಿದಂತೆ ಕಾಣುವುದು

 ಒಳಗಿನ ಮರ್ಮವ ನಾ ಹೇಗೆ ಅರಿಯುವುದು

 ಸಾಧು ನಾ ದುಷ್ಟನಾ ಮನವನೆನಿತು ಬಲ್ಲೆ
 
 ಕರುಣೆಯಿಂದ ಬಿಟ್ಟರೆ ನಾ ಚಂಗನೋಡಬಲ್ಲೆ




ರವಿ ತಿರುಮಲೈ 

9632246255

2 comments:

  1. ಪ್ರಾಣಿಯ ಭಾವನೆ ಅತೀ ಉತ್ತಮವಾಗಿದೆ..
    ಆದರೆ ಇಲ್ಲಿ ಚಿತ್ರ ಸರಿಯಾಗಿ ಕಾಣುತ್ತಿಲ್ಲ...
    ಧರಣಿ ಮಂಡಲ ಮಧ್ಯದೊಳಗೆ ... ಎನ್ನುವ ಪದ್ಯ ನೆನಪಾಯಿತು..
    ಕವಿತೆಯ ಭಾವಾರ್ಥ ಬಲು ಸೊಗಸಾಗಿದೆ.. ಸರ್.. :)

    ReplyDelete
  2. ಎಂತಹ ಹೃದಯ ಒಡೆದು ಹೋಗುವ ಸನ್ನಿವೇಶ.
    ಈಗಲೋ ಆಗಲೋ ತಿಂದೇ ಬಿಡುತ್ತವೇನೋ?
    ಅವುಗಳ ಮುಂದೆ ಹುಲ್ಲೆಯಳಲು ಫಲಿಸೀತೇ?

    'ಚಂಗನೋಡಬಲ್ಲೆ' lyric value ದ್ವಿಗುಣಿಸಿದೆ.

    ReplyDelete