Tuesday 2 January 2018

ಸುಖದಾಸೆಯ ಭ್ರಮೆ



ಈ ಜಗತ್ತಿನಲ್ಲಿ ಹುಟ್ಟಿದ ಪ್ರತೀ ಪ್ರಾಣಿಯೂ ಸುಖವಾಗಿರಬೇಂದುಕೊಳ್ಳುವುದು ಬಹಳ ಸಹಜ. ಆದರೆ ಆ ಸುಖ ಏನು, ಯಾವ ರೀತಿಯ ಬದುಕನ್ನು ಸುಖವಾದ ಬದುಕು ಎನ್ನಬೇಕು ಎನ್ನುವುದು ನಮಗೆ ಗೊತ್ತಿರುವುದಿಲ್ಲ. ಹುಚ್ಚು
ಹಿಡಿದವರಂತೆ ಭ್ರಮಾಧೀನರಾಗಿ ಸುಖದ ಬೆನ್ನ ಹತ್ತಿ ಅಂತ್ಯದಲ್ಲಿ ನಿರಾಶರಾಗುವವರೇ ನಾವೆಲ್ಲಾ.  ಒಂದು ವಿಶಾಲವಾದ ಹುಲ್ಲ ಬಯಲಲ್ಲಿ,ಒಂದು ಆಕಳ ಕರು ಚಂಗು ಚಂಗೆಂದು ನೆಗೆಯುತ್ತಾ 'ಒಳ್ಳೆಯ ಹುಲ್ಲು ಇಲ್ಲಿದೆ,  ಆಲ್ಲಿ ಚೆನ್ನಾಗಿದೆ ಅಥವಾ ಇನ್ನೂ ಎಲ್ಲೋ ಚೆನ್ನಾಗಿರಬಹುದು" ಎಂದು ಯೋಚಿಸಿಎಲ್ಲ ಕಡೆ ಓಡಿಕಡೆಗೆ ಎಲ್ಲಿಯೂ ಮೆಲ್ಲದೆಯೇ ಓಡಿ ಓಡಿ ದಣಿವಂತೆ ಇದೆ ನಮ್ಮ ಪರಿಸ್ತಿತಿ.

ಮನುಷ್ಯನೂ ಸೇರಿದಂತೆ ಪ್ರತೀ ಪ್ರಾಣಿಯೂ ಸುಖವನ್ನೇ ಬಯಸುತ್ತದೆ. ಆದರೆ ಆ 'ಸುಖಎಂದರೆ ಏನುಅದು ಎಲ್ಲಿ ಸಿಗುತ್ತದೆ ಮತ್ತು ಹೇಗೆ ಸಿಗುತ್ತದೆ ಎನ್ನುವುದು ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ನಾವು ಅ ಸುಖವನ್ನು ಎಲ್ಲಂದರಲ್ಲಿ ಹುಡುಕುತ್ತೇವೆ. ನಾವು ಯಾವುದೋ ಒಂದು ವಸ್ತುವಿನಿಂದ ಸುಖ ಸಿಗುತ್ತದೆ ಎಂದು ಅಂದುಕೊಳ್ಳುತ್ತೇವೆ ಮತ್ತು ಅದನ್ನು ಪಡೆಯಲು ಪ್ರಯತ್ನಿಸುತ್ತೇವೆ. ಅದು ಸಿಕ್ಕರೆ  ತತ್ಕಾಲದಲ್ಲಿ ಸುಖವನ್ನು ಅನುಭವಿಸಿದ ನಂತರ 'ಅಯ್ಯೋ ಇಷ್ಟೇನೇಎನ್ನುವ ಭ್ರಮನಿರಸನಕ್ಕೊಳಗಾಗುತ್ತೇವೆ. ಅಲ್ಲಿಂದ ನಮ್ಮ ಹುಡುಕಾಟ ಮತ್ತೆ ಶುರುವಾಗುತ್ತದೆ. ಈ ಸುಖದ ಭ್ರಮೆಗೆ ಕೊನೆಯೇ ಇಲ್ಲ ಅಲ್ಲವೇಈ ಭ್ರಮೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಪ್ರಮಾಣ ಭೇದವಿದ್ದರೂ 'ಭ್ರಮೆ'ಯಂತೂ ಎಲ್ಲರಲ್ಲೂ ಇದ್ದೇ  ಇರುತ್ತದೆ.  

ಇಂದ್ರಿಯ ಪ್ರೇರಿತವಾದ ಈ ದೇಹಕ್ಕೆ ನಾವು ಅಂಟಿಕೊಂಡಿರುವವರೆಗೆ ನಾವು ಈ ಸುಖದ ಭ್ರಮೆಯಲ್ಲೇ ಜೀವಿಸುತ್ತೇವೆ. ಮನಸ್ಸು ಬುದ್ಧಿ ದೇಹ ಮತ್ತು ಆತ್ಮಗಳ ಸಮ್ಮಿಲನದಿಂದಾದ ನಮ್ಮ ಅಸ್ಥಿತ್ವದಲ್ಲಿ 'ನಮ್ಮನ್ನುನಾವು ಎಲ್ಲಿಯತನಕ ನಮ್ಮ ಮನಸ್ಸು ಬುದ್ಧಿ ದೇಹಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ ಅಲ್ಲಿಯ ತನಕ ಈ ಭ್ರಮೆ ನಮ್ಮನ್ನು ಬಿಡುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ರೀತಿಯ ಸುಖಕ್ಕಾಗಿ 'ಹುಲ್ಲ ಮೇಯಲು ಹೊರಟ  ಕರುವಿನಂತೆ'  ನಾವೂ ಸಹ ಪರದಾಡುತ್ತಿರುತ್ತೇವೆ. 

ಹಾಗಲ್ಲದೆ,  'ನಾನುಎಂದರೆ 'ಆತ್ಮಎಂದುಎಂದು ಸಂಪೂರ್ಣ ಅರಿವಾಗುತ್ತದೋ ಅಂದು ನಮ್ಮ ಈ ಸುಖದ ಭ್ರಮೆಯ ಓಟ ನಿಲ್ಲಬಹುದು. ಅದಕ್ಕೆ ನಮಗೆ ನಿಜವಾದ  ಸುಖವೆಂದರೇನು ಎಂದು ಅರಿವಾಗಬೇಕು. ಆ ಅರಿವು ಮೂಡಿದೊಡನೆಯೇ ನಮ್ಮ ಓಟ ನಿಲ್ಲುತ್ತದೆ ಮತ್ತು ಇಂದ್ರಿಯಾತೀತವಾದ ಆನಂದದ ಅನುಭವವಾಗುತ್ತದೆ. ಸತ್ಯವಾದ ಮತ್ತು ನಿತ್ಯವಾದ ಸುಖ ಬೇಕಾದವರು ಅಂತಹ ಪ್ರಯತ್ನವನ್ನು ಮಾಡಬೇಕು. 'ಇಲ್ಲ ಈ ಜಗತ್ತನ್ನು ಬಿಟ್ಟರೆಬೇರೆ ಏನಿದೆ ಎಂದು ನನಗೆ ಗೊತ್ತಿಲ್ಲ್ಲ. ಇಲ್ಲಿರುವಾಗ ಈ ಸುಖವನ್ನು ಅನುಭವಿಸಿಬಿಡುತ್ತೇನೆಎಂದು ಹೇಳುವವರಿಗೆ 'ಸುಖದ ಭ್ರಮೆಯ ಓಟ ' ನಿಲ್ಲುವುದೇ ಇಲ್ಲ.  
  
ನಾವು ಎಲ್ಲಿಯತನಕ ನಮ್ಮ ಮನಸ್ಸು ಬುದ್ಧಿ ದೇಹಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ ಅಲ್ಲಿಯತನಕ ಈ ಭ್ರಮೆ ನಮ್ಮನ್ನು ಬಿಡುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ರೀತಿಯ ಸುಖಕ್ಕಾಗಿ ' ಹುಲ್ಲ ಮೇಯಲು ಹೊರಟ  ಕರುವಿನಂತೆ'  ನಾವೂ ಸಹ ಪರದಾಡುತ್ತಿರುತ್ತೇವೆ.

ಹಾಗಲ್ಲದೆ,  'ನಾನು' ಎಂದರೆ 'ಆತ್ಮ' ಎಂದು,  ಎಂದು ಸಂಪೂರ್ಣ ಅರಿವಾಗುತ್ತದೋ ಅಂದು ನಮ್ಮ ಈ ಸುಖದ ಭ್ರಮೆಯ ಓಟ ನಿಲ್ಲಬಹುದು. ಅದಕ್ಕೆ ನಮಗೆ ನಿಜವಾದ  ಸುಖವೆಂದರೇನು ಎಂದು ಅರಿವಾಗಬೇಕು. ಆ ಅರಿವು ಮೂಡಿದೊಡನೆಯೇ ನಮ್ಮ ಓಟ ನಿಲ್ಲುತ್ತದೆ ಮತ್ತು ಇಂದ್ರಿಯಾತೀತವಾದ ಆನಂದದ ಅನುಭವವಾಗುತ್ತದೆ. ಸತ್ಯವಾದ ಮತ್ತು ನಿತ್ಯವಾದ ಸುಖ ಬೇಕಾದವರು ಅಂತಹ ಪ್ರಯತ್ನವನ್ನು ಮಾಡಬೇಕು. 'ಇಲ್ಲ ಈ ಜಗತ್ತನ್ನು ಬಿಟ್ಟರೆ, ಬೇರೆ ಏನಿದೆ ಎಂದು ನನಗೆ ಗೊತ್ತಿಲ್ಲ.  ಇಲ್ಲಿರುವಾಗ ಈ ಸುಖವನ್ನು ಅನುಭವಿಸಿಬಿಡುತ್ತೇನೆ' ಎಂದು ಹೇಳುವವರಿಗೆ 'ಸುಖದ ಭ್ರಮೆಯ ಓಟ ' ನಿಲ್ಲುವುದೇ ಇಲ್ಲ. ಆಯ್ಕೆಯ ಸಂಪೂರ್ಣ ಸ್ವಾತಂತ್ರ ನಮಗಿದೆ ಅಲ್ಲವೇ?    


No comments:

Post a Comment