Wednesday 8 February 2012

ಕನ್ನಡ ಬ್ಲಾಗಿನ ಗೆಳೆಯರು

ಈ ಕನ್ನಡ ಬ್ಲಾಗಿನ ಗೆಳೆಯರನು 
ಮುಖತಃ ನೋಡದಿದ್ದರೇನು 
ಬೆಳೆದಿದೆ ಒಂದು ಪ್ರೀತಿಯ ತಂತು 
ಕಳೆದಿದೆ ಅಪರಿಚಿತರೆಂಬ ಮಾತು 

ಹೃದಯ ಸಂವೇದನೆಗೆ ರೂಪ ಬೇಕಿಲ್ಲ
ಪ್ರೇಮದ ಭಾಷೆಗೆ ಶಬ್ದದದರಿವಿಲ್ಲ
ಮನಕೆ ಮನವು ಸವಿನುಡಿಯ ನುಡಿದಾಗ
ಚಿಗುರುವುದೆಲ್ಲರ ಮನದಿ ಪ್ರೇಮಾನುರಾಗ.

ಸಹೃದಯವೇ ಸಾಕಾರವಾದ
ಎಲ್ಲ ಗೆಳೆಯರ ಮೂಕ ಸಂವಾದ
ನೋಡದಿದ್ದರೇನಂತೆ ಪ್ರೀತಿಗೇನು ಕೊರತೆ
ಉಕ್ಕುತ್ತಿರುವಾಗ ಭಾವರಸದಾ ಒರತೆ

ಪುಟ್ಟ ಮಕ್ಕಳಿವರಲ್ಲ, ಭಾವ ಪ್ರಬುಧ್ಧರು
ಒಬ್ಬರಿಗೊಬ್ಬರು ಹೃದಯದಿಂ ಬಧ್ಧರು
ಬರವಣಿಗೆಯಲ್ಲಿ ಎತ್ತಿದಕೈ ಒಬ್ಬೊಬ್ಬರು
ವಿನಯ ವಿನಮ್ರತೆಯ ಮೂರ್ತಿಗಳೆಲ್ಲರು

ಹಿಂದೆ ನಾ ಕವಿತೆಯಂಬ ಸಾಲುಗಳ ಬರೆಯುತ್ತಲಿದ್ದೆ
ಮತ್ತೆ ಬರೆಯಲು ಸ್ಪೂರ್ತಿಯಿಲ್ಲದೆ ನಾ ಅದ ಮರೆತಿದ್ದೆ
ಇಂದು ಹಲವಾರು ಸಹೃದಯ ಸ್ನೇಹಿತರು ಸಿಕ್ಕಿಹರು
ಮತ್ತೆ ನಾಲ್ಕು ಪಂಕ್ತಿ ಬರೆಯಲು ಇಂಬನಿತ್ತಿಹರು

ಒಮ್ಮೆ ಒಂದಾಗಿ ಎಲ್ಲರನು ನೋಡುವಾಸೆ
ಹಿಂದೊಮ್ಮೆ ಹೇಳಿರುವೆ ನನ್ನ ಮನದಾಸೆ
ಎಂದು ಆಗುವುದೋ ನನ್ನಾಸೆ ಪೂರ್ತಿ
ಇಂದು ಬದ್ರಿಯಾ ಕಥೆ ಈ ಕವಿತೆಗೆ ಸ್ಫೂರ್ತಿ

ಇಂದು Nataraju Seegekote Mariyappa ನವರು Badarinath Palavalli ಯವರ ಬಗ್ಗೆ ಬರೆದ
ಒಂದು ಲೇಖನವೇ ನನ್ನ ಈ ಕವಿತೆ ( ಕವಿತೆ ಎನ್ನ ಬಹುದೋ ಇಲ್ಲವೋ ಗೊತ್ತಿಲ್ಲ) ಸ್ಫೂರ್ತಿ. ಬರೆದ ನಾಟ್ಯದರಸಿನಿಗೂ ಲೇಖನಕ್ಕೆ ವಸ್ತುವಾದ ಆಮಲಕದರಸನಿಗೂ ನನ್ನ ಹೃದಯ ತುಂಬಿದ ಧನ್ಯವಾದಗಳು

1 comment:

  1. ಕನ್ನಡ ಬ್ಲಾಗಿನ ಗೆಳೆಯರ ಕುರಿತಾದ ನಿಮ್ಮ ಕವನ ತುಂಬಾ ಚೆನ್ನಾಗಿದೆ ಸರ್.... ನೀವು ಇಲ್ಲಿ ಬರೆದಿರೋ ವಿಷಯವೇ ನನ್ನ ಮನದಲ್ಲಿ ಮೂಡುತ್ತಿತ್ತು , ಹೇಗೆ ಬಣ್ಣಿಸುವುದು ಎಂದು ಯೋಚಿಸುವಷ್ಟರಲ್ಲಿ ನಿಮ್ಮ ಕವನ ಕಣ್ಣಿಗೆ ಬಿತ್ತು.. ಬಹುಷಃ ನಿಮಗೆ ಅನ್ನಿಸಿದ್ದು ಹಾಗು ನನಗನಿಸಿದ್ದು ಕಾಕತಾಳಿಯ ಏನೋ ಅಂದುಕೊಂಡಿದ್ದೆ ಆದರೆ ಎಲ್ಲಾ ಕವಿಗಳಿಗೂ ಹೀಗೆ ಅನ್ನಿಸಿರಬೇಕು ಎಂದು ಈಗ ಅನ್ನಿಸುತ್ತಿದೆ.

    ReplyDelete