Tuesday 7 February 2012

ನೀನಾರಿಗಾದೆಯೋ ಎಲೆ ಮಾನವ.




ಮುದ್ದಾದ ಕುರಿಮರಿಯೊಂದನ್ನು 


ಅಕ್ಕರೆಯಿಂದ ತಂದು, ಹಸಿರು, 

ಎಲೆ, ಹುಲ್ಲು, ಸೊಪ್ಪು ಸೊದೆಗಳ

ಜೊತೆಗೆ ನಿಮ್ಮ, ಮನೆಯವರ 

ಪ್ರೀತಿಯಕ್ಕರೆಯ ಉಣಬಡಿಸಿ, 

ತನ್ನ ಮಕ್ಕಳಂತೆ, ಬೆಳೆಸಿ



ಪಾಪ, ತನ್ನ ಸಾಕುವರೆಂದು 

ನಿಮ್ಮ ನೋಡಿ,ದೈನ್ಯತೆಯೇ,

ಕರುಣೆಯೇ ಮೂರ್ತವೆತ್ತಂತೆ 

ನಿಮ್ಮ ಮನೆಯ ಬಾಗಿಲಲ್ಲಿ 

ನಿಂತು, ಬ್ಯಾ ಬ್ಯಾ ಎಂದು 

ತನ್ನೆಲ್ಲ ಭಾವನೆಗಳ ನಿಮಗರುಹಿ 



ತನ್ನ ಬಲಿಕೊಡುವ ದಿನವೂ 

ಅರಿಯದೆ ನಿಮ್ಮ ಹಿಂದೆ ಮುಂದೆ 

ಸುತ್ತುವ ಆ ಮೂಕ ಪ್ರಾಣಿಯ 

ಮನದಾಳವ ಅರಿಯದೆ 

ಅದ ಕಡಿದು, ತುಂಡರಿಸಿ 

ತಿಂದು ತೇಗುವ 

ನೀನಾರಿಗಾದೆಯೋ ಎಲೆ ಮಾನವ.


ತಿರುಮಲೈ ರವಿ

3 comments:

  1. ಮನುಷ್ಯರೇ ಹೀಗೆ ಸಾರ್ ....ಯಾವಾಗಲು ನಮ್ಮ ಲಾಭವನ್ನೇ ನೋಡುತ್ತೇವೆ.. ! ಚಂದವಾಗಿ ಹೆಣೆದಿರುವ ಸಾಲುಗಳು..! ತುಂಬಾ ಚೆನ್ನಾಗಿದೆ..!

    ReplyDelete
  2. ತುಂಬ ಚೆನ್ನಾಗಿ ಮೂಡಿ ಬಂದಿದೆ ಗುರುಗಳೆ !

    ReplyDelete