Friday 20 January 2012

ಹುಡುಕಾಟ




ಹುಡುಕಾಟ 


ಗೋಕುಲದಲ್ಲಿ ಶ್ರೀ ಕೃಷ್ಣನನ್ನು ಕಾಣದೆ ಒಂದು ನಿಮಿಷವೂ ಇರಲಾರದ ಗೋಪಿಕೆಯರ ತವಕ ಮತ್ತು ಅವನಿಗಾಗಿ ಅವರು ಪಡುವ ಪರಿತಾಪ ಅಷ್ಟಿಷ್ಟಲ್ಲ. ಅವನನ್ನು ಕಾಣಲು ತಪತಪಿಸಿ ತಡೆಯಲಿಕ್ಕಾಗದೆ ಹುಡುಕುತ್ತಾರೆ. ಆ ರೀತಿಯ ಹುಡುಕಾಟದ ಭಾವವೇ ಈ ಹಾಡಿನ ಮೂಲ ರೂಪ. 



ಹೇ ಸಖೀ ಬಾರೆ 
ಹುಡುಕುವ ನಾವೂ 
ಚೆಂದದಾ ಚೆನ್ನಿಗನೆಲ್ಲಿಹನೆಂದೂ 

ನಂದನರಮನೆಯಲ್ಲಿ ಕಾಣಹೋದೆನೆ  ನಾ 
ಅಂದದಾ  ಚೆನ್ನಿಗನಲ್ಲಿರಲಿಲ್ಲ 
ಎತ್ತಪೋದನೆಂದು ಕೇಳಲು ನಾಚೀ ನಾ(೨) 
ಸುತ್ತ ಒಮ್ಮೆ ನೋಡಿ ಸುಮ್ಮನೆ ಬಂದೆನೇ(೨) 
 "ಹೇ ಸಖೀ ಬಾ ರೆ "

ಗೋಪಬಾಲಕರ ಗುಂಪಿನ ನಡುವೆ 
ನೆಟ್ಟನೋದಿ  ನಾನರೆಸಿದೆನಲ್ಲೇ 
 ರಂಗನಾ ರಂಗಲ್ಲಿ ಕಾಣದೆ ನಾ (೨) 
      ಕಣ್ಣೀರುಡುತಾ  ಕುಸಿದೆನಲ್ಲೇ (೨)               
 "ಹೇ ಸಖೀ ಬಾರೆ "

ಮನೆಗಳ ಹಾದಿಯ ಹಿಡಿದ ಗೋಗಳ 
ಮಾಧವನೆಲ್ಲೆಂದು  ಕೇಳಿದೆನಲ್ಲೇ   
ಮರುಮಾತಿಲ್ಲದೆ ಮೋರೆಯ ತಿರುವುತಾ (೨) 
           ಮೌನ ಗೀತೆಯಾ ಹಾಡಿದವಲ್ಲೇ (೨)            
"ಹೇ ಸಖೀ ಬಾರೆ "

ರವಿ ತಿರುಮಲೈ 


ಈ ಹಾಡನ್ನು ಹಿಂದೂಸ್ತಾನಿ ಶೈಲಿಯ " ತೋಡಿ " ಅಥವಾ " ಗುಜರಿ ತೋಡಿ" ರಾಗದಲ್ಲಿ ಹಾಡಿದರೆ ಹಾಡಿನ ಮೂಲ ಭಾವವನ್ನು ಉಳಿಸಿಕೊಳ್ಳಬಹುದು 

7 comments:

  1. [ಅಂದಂದಾ]
    ಅಂದದಾ ಎಂದಿರಬೇಕಲ್ಲವೇ?
    ಚಿತ್ರ ತುಂಬಾ ಚೆನ್ನಾಗಿದೆ. ನಿಜವಾಗಿ ಕೃಷ್ಣನಿಗೆ ನೂರಾರು ಗೋಪಿಕಾ ಸ್ತ್ರೀಯರಿದ್ದರೇ? ಎಲ್ಲರ ಮನದಲ್ಲಿ ಅವನಿದ್ದನೆಂಬುದಕ್ಕೆ ನೂರಾರುಗೋಪಿಕಾ ಸ್ತ್ರೀ ಪಾತ್ರ ಸೃಷ್ಟಿಯಾಗಿರಬಹುದಲ್ಲವೇ?

    ReplyDelete
    Replies
    1. ನಿಮ್ಮ ಸಲಹೆಗೆ ಧನ್ಯವಾದಗಳು. ತಿದ್ದಿದ್ದೇನೆ. ಹಾಗೆ ಪುರಾಣಗಳು ಏನೇನನ್ನೋ ಹೇಳುತ್ತವೆ. ವ್ಯಾಸರ ಭಾಗವತದ ವ್ಯಾಖ್ಯಾನ, ಮುನ್ಷಿಯವರ ಕೃಷ್ಣಾವತಾರ, ಸಮ್ಮೇತನಹಳ್ಳಿ ರಾಮರಾಯರ ಕೃಷ್ಣದರ್ಶನ ಹೀಗೆ ಹತ್ತು ಹಲವಾರು ಬರಹಗಾರರು ಬೇರೆ ಬೇರೆ ರೀತಿಯ ವ್ಯಾಖ್ಯಾನ ಮಾಡಿದ್ದಾರೆ. ಸರ್ವ ವ್ಯಾಪಕತ್ವವನ್ನು ಹೇಳಲು ಒಂದೊಂದು ಮಾರ್ಗ.

      Delete
  2. ಚೆನ್ನಾಗಿದೆ ರವಿ ಸರ್. ಸಂಗೀತದಲ್ಲಿ ಇದು ತುಂಬಾ ಆಸ್ವಾದನೀಯ ಆಗಬಹುದೇನೋ..

    ReplyDelete
  3. ಸೊಗಸಾಗಿ ಮೂಡಿಬಂದಿರುವ ಕವನ..
    ಕೃಷ್ಣನ ಲೀಲೆ ಕಣ್ಣಿಗೆ ಕಟ್ಟುವಂತಿದೆ..

    ReplyDelete
  4. ಅತೀ ಸುಂದರ ಸರ್ ... ಪದೇ ಪದೇ.. ಇದನ್ನು ನಾಲ್ಕಾರು ಸಾರಿ ಓದಿದಾಗ ಹಾಡುವ ಮನಸ್ಸಾಗುತ್ತದೆ.. ಆದರೇನು ಮಾಡೋದು ನಾವು ಹಾಡುಗಾರರಲ್ಲವಲ್ಲ.. :)
    ಈ ಕವನವನ್ನು ಹಾಡಿನೊಂದಿಗೆ ನೃತ್ಯ ಸಂಯೋಜನೆ ಮಾಡಿ , ನಂತರ ಅಲ್ಲಿ ಮೂಡುವ ರಮಣೀಯ ದೃಶ್ಯದ ಸೊಬಗನ್ನು ಕಲ್ಪನೆಯಲ್ಲಿಯೇ ಊಹೆ ಮಾಡಿಕೊಂಡರೆ .. ಆಹಾ ಅದೇನು ಸೌಂದರ್ಯ ಮತ್ತು ಸುಮಧುರ ಸಿಹಿ ಕ್ಷಣಗಳು ನೋಡಲು ಮತ್ತು ಕೇಳಲು.. ತುಂಬಾ ತುಂಬಾ ಹಿಡಿಸಿತು ಈ ಕವನ .. ಮನಸ್ಸಿನಲ್ಲಿ ಪದಗಳನ್ನು ಗುನುಗುವಂತೆ ಮಾಡುತ್ತಿದೆ.. :)
    ಮನೆಗಳ ಹಾದಿಯ ಹಿಡಿದ ಗೋಗಳ .. ಮಾಧವನೆಲ್ಲೆಂದು ಕೇಳಿದೆನಲ್ಲೇ .. ಮರುಮಾತಿಲ್ಲದೆ ಮೋರೆಯ ತಿರುವುತಾ .. ಮೌನ ಗೀತೆಯಾ ಹಾಡಿದವಲ್ಲೇ .. :)
    "ಹೇ ಸಖೀ ಬಾರೆ " .. ಈ ಕವನ ಈಗ ನಮ್ಮ ಮನಸ್ಸಲ್ಲಿ.. :)

    ReplyDelete
  5. ಗೋಪಿಕೆಯರ ತಳಮಳ ಅತ್ಯುತ್ತಮವಾಗಿ ವೇದ್ಯವಾಗಿದೆ ಸಾರ್.

    ನೀವು ಉತ್ತಮ ಆದ್ಯಾತ್ಮ ಕವಿ.

    ReplyDelete
  6. ಕೃಷ್ಣನಿಗೆ ನೂರಾರು ಗೋಪಿಕೆಯರು ಇರಲು ಸಾದ್ಯವಿಲ್ಲ ಎಂದು ಅದೇಕೆ ಭಾವಿಸುತ್ತಾರೆ. ಈಗಲು ಹೃತಿಕ್ ರೋಶನ್ ಅಥವ ಇನ್ಯಾರೊ ಬರುತ್ತಾರೆ ಎಂದರೆ ಬೆಂಗಳೂರಿನಲ್ಲಿ ಸಾವಿರಾರು ಹುಡುಗಿಯರು ನೆರೆದು ಕಾಯುತ್ತಿರುತ್ತಾರೆ, ಮುತ್ತಿಗೆ ಹಾಕುತ್ತಾರೆ ಹಾಗಿರಲು ನಮ್ಮ ಕೃಷ್ಣನಿಗೆ ನೂರು ಗೋಪಿಕೆಯರು ಅಂದರೆ ಅದೇಕೆ ಅಸಾದ್ಯ??

    :))))

    ReplyDelete