Sunday 29 January 2012


ನದಿ




ಭಾನು ಪ್ರಕಾಶನ ಶಾಖಕ್ಕೆ ಆವಿಯಾಗಿ 

ಮೂಲ ತೊರೆದು ದಿವಿಗೇರಿ

ಹಾರುತ್ತಾ ತನ್ನಂತವರ ಸೇರಿ

ಸೇರಿ ಸೇರಿ ಸತ್ವಯುತವಾಗಿ




ಮೋಡವೆಂದೆನಿಸಿಕೊ೦ಡು

ಧುಮುಕಿ ಧರೆಗಿಳಿದು

ಹನಿ ಎಂದೆನಿಸಿಕೊಂಡು

ಸೇರಿ ಸೇರಿ ತನ್ನಂತವರ


ಸ್ತ್ರೀ ರೂಪದಲಿ ಮಾತೆಯಂತೆ

ಹರಿವಾಗ ಸುಂದರ ಗೀತೆಯಂತೆ

ಜಾತಿ ಮತಗಳ ಭೇದ ಮಾಡದಂತೆ

ಸಮನ್ವಯದ ಭಾವ ತೋರುವಂತೆ


ಹಳ್ಳವಾಗಿ ತೊರೆಯಾಗಿ

ಹರಿ ಹರಿದು ನದಿಯಾಗಿ

ಕವಲೊಡೆದು ಧರೆ ತಣಿಸಿ

ಧರೆಯಲ್ಲರಿಗೆ ಉಣ ಉಣಿಸಿ


ಸಫಲತೆಯ ಭಾವದಿ ಧನ್ಯತೆಯ ಪಡೆದು

ಓಡಿ ಓಡಿ ಗಮ್ಯವ ಹುಡುಕಿ ನಡೆ ನಡೆದು

ಜ್ಞಾನ ಪಡೆದ ಭುವಿಯ ಆತ್ಮಗಳಂತೆ

ಮೂಲ ಸೇರುವಾತುರದಲಿ ಓಡುವಂತೆ


ರತ್ನಾಕರನ ಗರ್ಭಸೇರಿ

ಅಸ್ತಿತ್ವವಿಲ್ಲದೆ, ವಿಲೀನವಾಗುವೆ

ಮತ್ತದೇ ಚಕ್ರಕ್ಕೆ ಕಾರಣನಾದ

ಭಾನು ಪ್ರಕಾಶನ ಶಾಖಕ್ಕಾಗಿ ಕಾಯುವೆ.


ಇದಕ್ಕೆ ಶ್ರೀ Nataraj kangod ಅವರು ಪ್ರೇರಣೆ.

ರವಿ ತಿರುಮಲೈ

No comments:

Post a Comment