Tuesday 10 January 2012

ಮರೆಯಲಾಗದ ಕೃಷ್ಣ

ಗೋಕುಲದ ಕಣ್ಮಣಿ , ಗೋಪ-ಗೋಪಿಕೆಯರ ಮನಸ್ಸುಗಳಲ್ಲಿ ಸದಾ ತುಂಬಿರುವ ರೂಪ, ಆ ಶ್ರೀ ಕೃಷ್ಣ.
ಸದಾ ಕಾಲ ಅವನೊಡನೆ ಇರಬೇಕು, ಅವನ ಮಾತು ಕೇಳಬೇಕು, ಅವನ ಮುರಳೀ ಗಾನವ ಆಲಿಸಬೇಕು ಎಂದು ಹಾತೊರೆಯುವ ಅವರ ಮನಸ್ಸುಗಳು  ಅವನನ್ನು ಎಂದಿಗಾದರೂ ಮರೆಯಲು ಸಾಧ್ಯವೇ. ಅವರಿಗೆ ಆನಂದವೀಯುವ ರೂಪ ಅವರನ್ನು ಪೊರೆಯುವ ದೇವ ಅವನನ್ನು ಮರೆಯಲಾಗುವುದೇ. ಅಂಥಹ ಭಾವಗಳನ್ನೋಳಗೊಂಡ ಹಾಡು


ಕಂಡ ದಿನದಿಂದಲೇ
ಕಣ್ಣಲಿ ನೆಲೆಸಿರುವ
ಕೃಷ್ಣನಾ ಮರೆವುದು
ಸಾಧ್ಯವೇನೆ ಸಖೀ                                 "ಕಂಡ "

ಕೊಳಲ ನಾದದಿಂದ ಎಲ್ಲರ ತನ್ನೆಡೆಗೆ 
ಸೆಳೆವ ಮೋಹನ ಮೂರುತಿ ಅವನೇ
ಗೋಗಳ ಕಾಯುವ ನಟನೆಯ ಮಾಡುತ
ಗೋವರ್ಧನ ಗಿರಿ ಎತ್ತಿದವನಾ                 " ಕಂಡ"

ತಾವರೆ ಕಂಗಳ ತಿರುಗಿಸುತವನೂ
ತಾಯಿಗೆ ಜಗವನ್ನೇ ತೋರಿದನಲ್ಲೇ
ಜಗದೋಧ್ಧಾರನೆಂಬ ಬಿರುದನು ಪಡೆದ
ಜಗದೊಡೆಯನ ನಾ ಮರೆಯಲಹುದೇ      "ಕಂಡ "

ನಲಿ ನಲಿ ನಲಿಯುತ ನಲುಮೆಯ ತೋರುತಾ
ನಂದ ಗೋಪನ ಮನವನು ತಣಿಸುತ
ಬೆಣ್ಣೆಯ ಕದಿಯುತ ಚಿಣ್ಣರೊಡನಾಡುತ  
ಚಿನ್ಮಯರೂಪದಿ ಜಗವನು ಪೋರೆವನಾ   'ಕಂಡ "

ರವಿ ತಿರುಮಲೈ

No comments:

Post a Comment