ದೇವ ನೀನು ಪಾಲಿಸೆನ್ನ
ನೀಲ ಮೇಘ ಶ್ಯಾಮಾ " ದಾಸ"
ದಿವಿಯಲ್ಲೋ ಭುವಿಯಲ್ಲೋ
ನರಕಾಂತರಾಳದಲೋ
ಇಳಿಸು ಎನ್ನ, ಉಳಿಸು ಮನದಿ
ಚರಣಗಳ ನಿನ್ನ " ದಾಸ "
ಎನ್ನ ಪೂರ್ವ ಕರ್ಮದಂತೆ
ನಡೆವುದೆಲ್ಲ ನಡೆಯಲೀ
ಅದರ ರುಚಿಯ ಸವಿಯುವಾಗ
ನೀನೆ ನೆಲಸು ಮನದಲೀ " ದಾಸ "
ನೀನೆ ಮೂಲ ನೀನೆ ಗಮ್ಯ
ನೀನೆ ಎಲ್ಲ ರೂಪವೂ
ನನ್ನನಳಿಸು ಉಳಿಸು ನಿನ್ನ
ರೂಪ ಎನ್ನ ಮನದೊಳು " ದಾಸ
ರವಿ ತಿರುಮಲೈ
ದಾಸಾನುದಾಸ, ಒಳ್ಳೆ ಹಾಡಬಹುದಾದಂತಹ ಭಕ್ತಿಪೂರ್ವಕ ಗಾನ ..
ReplyDelete