Tuesday 10 January 2012

ದಾಸಾನುದಾಸ





ದಾಸಾನುದಾಸ
ದಾಸ ನಾನು ದಾಸ ನಾನು                      
ದಾಸ ನಾನು ಕೃಷ್ಣ 

ದೇವ ನೀನು ಪಾಲಿಸೆನ್ನ
ನೀಲ ಮೇಘ ಶ್ಯಾಮಾ      " ದಾಸ" 

ದಿವಿಯಲ್ಲೋ ಭುವಿಯಲ್ಲೋ 
ನರಕಾಂತರಾಳದಲೋ
ಇಳಿಸು ಎನ್ನ, ಉಳಿಸು ಮನದಿ 
ಚರಣಗಳ ನಿನ್ನ                " ದಾಸ  " 
       
ಎನ್ನ ಪೂರ್ವ ಕರ್ಮದಂತೆ 
ನಡೆವುದೆಲ್ಲ ನಡೆಯಲೀ 
ಅದರ ರುಚಿಯ ಸವಿಯುವಾಗ 
ನೀನೆ ನೆಲಸು ಮನದಲೀ        " ದಾಸ " 
 
ನೀನೆ ಮೂಲ ನೀನೆ ಗಮ್ಯ 
ನೀನೆ ಎಲ್ಲ ರೂಪವೂ 
ನನ್ನನಳಿಸು ಉಳಿಸು ನಿನ್ನ
ರೂಪ ಎನ್ನ ಮನದೊಳು       " ದಾಸ



ರವಿ  ತಿರುಮಲೈ  


1 comment:

  1. ದಾಸಾನುದಾಸ, ಒಳ್ಳೆ ಹಾಡಬಹುದಾದಂತಹ ಭಕ್ತಿಪೂರ್ವಕ ಗಾನ ..

    ReplyDelete