Friday 20 January 2012

ಎನ್ನ ಮನದಾಸೆ


"ಕನ್ನಡ ಬ್ಲಾಗಿನ ಎಲ್ಲ ಕವಿಗಳನ್ನೂ

ಒಂದೆಡೆ ಸೇರಿಸುವ ಕನಸೆನಗೆ

ಎಲ್ಲರ ಸುಂದರ ಭಾವಗಳನ್ನೂ 

ಒಮ್ಮೆಲೇ ಕೇಳುವ ತವಕವೆನಗೆ 

ಚಿನ್ನದ ಮೊಟ್ಟೆಯ ಹೊಟ್ಟೆ ಕೊಯ್ದು 

ಅತಿಯಾಸೆಯಿಂದ ಗತಿ 

ಕೆಡಿಸಿ ಕೊಂಡವನ ರೀತಿ 



ಎಷ್ಟೊಂದು ಭಾವಗಳು 

ಭಾವದಲಿ  ನೋವುಗಳು 

ನಲಿವುಗಳು, ಹಾಸ್ಯಗಳು,,

ವೇದಾಂತದ ಮಾತುಗಳು 

ಮಾತುಗಳಲ್ಲಿ ಚತುರೋಕ್ತಿಗಳು 

ನಮ್ಮೆಲ್ಲರ ಭಾವ ಅವರುಗಳ ಪದ್ಯ 



ಪುಷ್ಪರಾಜನ ಪ್ರೇಮಗೀತೆಗಳು

ಪಮ್ಮಿಯ ಪ್ರೀತಿಯ ಪರಿಭಾಷೆಗಳು
 
ಕೋಮಲನ ಅಣಕುವಾಡುಗಳು

ಬಷೀರಣ್ಣನ ಭಾವೋಕ್ತಿಗಳು

ಆನಂದಾಚಾರ್ಯನ ವಿರಹಗೀತೆಗಳು

ಹುಸೇನರ ಕನಸ ಯಾತ್ರೆಗಳು



ಬದ್ರಿ, ಮೂರ್ನಾಡರ ಪ್ರಬುಧ್ಧತೆ,

ಐ ಕೆ ಭಟ್ಟರ ಪುರಾಣಗೀತೆ

ಸಾರೋಡೆಯ ತಾಯಿಯ ಮಮತೆ 

ದಿವಾತರರ ಸಖೀಗೀತೆ

ಬೆಲ್ಲಾಲರ ಸಾಹಿತ್ಯವಾರ್ತೆ 

ಪರೇಶನ ವಿವಾಹ ಗೀತೆ

ಪ್ರಶಾಂತನ ಪುಷ್ಪಬಾಣ ವಿಲಾಸ,

ತಡಾದಿಕರರ ಕೋಕಿಲಗಾನ

ಸುಜಾತೆಯ ಮಂಜುಳಗಾನ

ಸೀಗೆಕೋಟೆಯ ಚುಟುಕಪುರಾಣ

ಕೊಳ್ಳೆಗಾಲರ ಸೃಷ್ಟಿ ಸಮತೋಲನ

ಪದ್ಮಶಾಲಿಯ ಉದಯಗಾನ



ಸತ್ತಾರ ಧೀರ ಹರಿಕಾರ

ಕನ್ನಡ ಕವಿತೆಯ ನೇತಾರ 

ಮೂರ್ನಾಡೇತರರ ಸಹಕಾರ

ಬೇರೆಲ್ಲಿದೆ ಇಂಥಹ ಆಕಾರ

ಎಲ್ಲರ ಹೆಸರ ಹೇಳಲಾಗದಂತೆ 

ದೇವರೂ ಸಹ ಮೂಕಸ್ಮಿತ


ಬನ್ನಿ ಮಿತ್ರರೇ, ಸೇರಿ ಒಂದು ಕಡೆ

ಒಮ್ಮೆ ನಿಮ್ಮನ್ನೆಲ್ಲಾ ನೋಡುವಾಸೆ

ಬಿಗಿದಪ್ಪಿ ಮುದ್ದಾಡುವಾಸೆ

ಒಂದು ಗೂಡಿಸು ನೀ ಶಕುಂತಲ

ಮಾಡಿಸು ನೀ ಕೋಲಾಹಲ 

.

ರವಿ ತಿರುಮಲೈ"
 · 

2 comments:

  1. ಸರ್........ನಿಮ್ಮನ್ನು "ಸರ್" ಅನ್ನೋದಕ್ಕಿಂಕ "ಆಚಾರ್ಯರೇ" ಅನ್ನೋದು ಹೆಚ್ಚು ವಿಹಿತ. ನಿಮ್ಮ ರಚನೆ ತುಂಬಾ ಸ್ಪೂರ್ತಿದಾಯಕ . ಹೀಗೆ ನಿಮ್ಮ ಆಶೀರ್ವಾದ ಕನ್ನಡ ಬ್ಲಾಗ್ ಗೆ ಇರಲಿ .

    ReplyDelete