Saturday 16 September 2017

ಯಾರಿಹರಿಲ್ಲಿ, ಈ ಜಗದೊಳಗೆ


ನಮ್ಮ ಕನ್ನಡದ ಗುರುದತ್ ನಿರ್ದೇಶಿಸಿ ನಟಿಸಿದ ' ಪ್ಯಾಸಾ' ಎನ್ನುವ ಹಿಂದಿ ಚಿತ್ರ ಬಂದದ್ದು ೧೯೫೭ ರಲ್ಲಿ. ಅದರೊಳಗಿನ ಒಂದು ವಿಷಾದಭರಿತ ಹಾಡು ' जाने  ओ कैसे लोगे थे जिनके  प्यार को प्यारा मिला , हमने तो जबा कलियाँ मांगी कांटोंका हार मिला ' . ಆ ಹಾಡಿನ ಕನ್ನಡದಲ್ಲಿ ಬರೆಯಲು ಪ್ರಯತ್ನಪಟ್ಟಿದ್ದೇನೆ. ಅದನ್ನು ಮೂಲ ಗೀತೆಯ  ರಾಗದಲ್ಲಿ ಹಾಡಲು ಪ್ರಯತ್ನವನ್ನೂ ಮಾಡಿದ್ದೇನೆ. ಇದರ ಧ್ವನಿ ಮುದ್ರಣವನ್ನೂ ಇಲ್ಲಿ ಹಾಕಿದ್ದೇನೆ. ಓದಿ, ಕೇಳಿ, ನನಗೆ ಸಂತೋಷವಾಗಿದೆ ನಿಮಗೂ ಇಷ್ಟವಾದರೆ ಸಂತೋಷ.

ಯಾರಿಹರಿಲ್ಲಿ, ಈ ಜಗದೊಳಗೆ
ಪ್ರೇಮಕೆ  ಪ್ರೇಮವ ಪಡೆದವರು
ಹೂವನು ಬಯಸಿ ಮುಳ್ಳಿನ ಹಾರವ
ಧರಿಸಿಹೆವು ನಾವಿಲ್ಲಿ         'ಯಾರಿಹರಿಲ್ಲಿ,

ಸಂತಸ ಬಯಸಿ ಹುಡುಕಲು, ನಮಗೆ
ದೊರೆಯಿತು ಗೋಳಿನ ಬುತ್ತಿ  ,
ಮನವ ತಣಿಸುವ ಗೀತೆಯ ಬಯಸೆ
ದೊರೆಯಿತು ಕೇವಲ ನಿಟ್ಟುಸಿರು
ಹೃದಯ ಭಾರವ ಇಮ್ಮಡಿಗೊಳಿಸುವ
ದುಃಖವೆ  ದಕ್ಕಿತು  ನಮಗೆ

ಹೂವನು ಬಯಸಿ ಮುಳ್ಳಿನ ಹಾರವ
ಧರಿಸಿಹೆವು ನಾವಿಲ್ಲಿ     ।। ಯಾರಿಹರಿಲ್ಲಿ, ।।

ತೊರೆದು ಹೋದರೆಲ್ಲಾ
ತೊರೆದು ಹೋದರೆಲ್ಲಾ

ತೊರೆದು ಹೋದರು ಎಲ್ಲಾ ಸಖರು
ಗಳಿಗೆಯರಡರ ಸಂಗವನಿತ್ತು
ಹುಚ್ಚರ ಸಂಗವ ಮಾಡಲು
ಯಾರಿಗೆ ಸಮಯವಿಹುದು ಹೇಳಿ.

ನಮ್ಮನ್ನು ನಮ್ಮ ನೆರಳೂ ಸಹಿತ
ಬಿಟ್ಟು ಓಡಿತಲ್ಲಾ

ಹೂವನು ಬಯಸಿ ಮುಳ್ಳಿನ ಹಾರವ
ಧರಿಸಿಹೆವು ನಾವಿಲ್ಲಿ     ।। ಯಾರಿಹರಿಲ್ಲಿ, ।।

ಇದಕೇ  ಬಾಳು ಎಂದರೆ ನಾವು
ಹೀಗೇ ಬದುಕುವೆವು
ಬೇಸರಿಸದೆ ನಾವು
ತುಟಿಯನು  ಹೊಲೆದು
ಕಣ್ಣೀರ್  ಕುಡಿಯುವೆವು

ದುಃಖಕೆ ಏಕೆ  ಹೆದರುವುದಿಂದು
ಸಾವಿರಸಲ ದೊರೆಕಿಹುದು

ಹೂವನು ಬಯಸಿ ಮುಳ್ಳಿನ ಹಾರವ
ಧರಿಸಿಹೆವು ನಾವಿಲ್ಲಿ     ।। ಯಾರಿಹರಿಲ್ಲಿ, ।।

https://soundcloud.com/tirumalai-ravi/yaariharilli-ee-jagadolage

1 comment:

  1. ಅದ್ಭುತ ಚಿತ್ರದ ಅದ್ಭುತ ಗೀತೆಯನ್ನು ಅಷ್ಟೇ ಸುಮಧುರವಾಗಿ ಕನ್ನಡೀಕರಿಸಿ ಅದರ ಭಾವವನ್ನು ಹಾಗೆ ಉಳಿಸಿಕೊಂಡು ಹಾಡಿರುವ ಶೈಲಿ ಸೊಗಸಾಗಿದೆ ಗುರುಗಳೇ..ಅಭಿನಂದನೆಗಳು

    "ನಮ್ಮನ್ನು ನಮ್ಮ ನೆರಳೂ ಸಹಿತ
    ಬಿಟ್ಟು ಓಡಿತಲ್ಲಾ" ಕಾಡುವ ಸಾಲುಗಳು

    ReplyDelete