Friday 9 March 2012



ನಭ ಧರಣಿಗಳೆರಡರ  ನಡುವೆ 
ನಾಟ್ಯವದು ನಡೆದಿರಲು 
ಆನಂದಿಸಿದೆ ವಸುಂದರೆ 
ಉನ್ಮತ್ತ ಆ ಮುಗಿಲು. 
ಗಾಳಿ ತುಯ್ದಾಟವೆ
ಸಂಗೀತವಾಗಿರಲು
ಘಳಿಗೆಗಳ ನಡೆಯಮಗೆ
ತಾಳ ವಾದ್ಯವಾಗಿರಲು

ಕರಿಯ ಗಿರಿಯದು ಇಂದು
ಕಾತರದಿ ಈಕ್ಷಿಸಿರೆ
ವೀಕ್ಷಿಸುವ ಮೋಡವದು
ಶಾಸ್ತ್ರವ  ಪರೀಕ್ಷಿಸಿರೆ

ಚಿನ್ನದ ಮುಕುಟವ ಧರಿಸಿ
ಗರಿಗೆದರಿ ಭಯ ಸರಿಸಿ
ಕಣ್ಣೊಳಗೆ  ಕಣ್ಣಿರಿಸಿ
ಸಾಂಗತ್ಯವನು ಬಯಸಿ

ಸೃಷ್ಟಿಗೆ  ಮೂಲವದಿಂದು 
ಬಯಕೆ ಬಲವಂದು 
ತಾಂಡವ ನೃತ್ಯವದು 
ಹಂಗಿಲ್ಲ ಯಾರದೂ 

ರವಿ  ತಿರುಮಲೈ 


2 comments:

  1. ಸೃಷ್ಟಿಯ ಅತಿ ಮುಖ್ಯ ಘಟ್ಟವನ್ನು ಅತಿ ಜಾಣ್ಮೆಯಿಂದ ಮತ್ತು ಅಶ್ಲೀಲವಾಗದಂತೆ ಹೆಣೆದು ಕೊಟ್ಟಿದ್ದೀರಿ.

    ಪದ ಬಳಕೆಯಲ್ಲಿ ಮತ್ತು ಅದರ ನೇಯುವಿಕೆಯಲ್ಲಿ ನವೋದಯದ ಲಾಲಿತ್ಯವಿದೆ.

    ಒಳ್ಳೆಯ ಚಿತ್ರ ಕಾವ್ಯ...

    ReplyDelete
  2. ಚೆನ್ನಾಗಿದೆ ಸರ್.
    ಚಿತ್ರವೂ ಸಹ.
    ಗುಡಿಯ ಸಂಭ್ರಮದಲ್ಲಿ ನಿಮ್ಮ "ಪುಣ್ಯಾರಣ್ಯ" ಮತ್ತು ವೃಕ್ಷಗಳ ಮಾಹಿತಿಯ ಲೇಖನದ
    ಅನುವಾದ (ಹೆಸರು ಮರೆತಿದ್ದೇನೆ ಕ್ಷಮಿಸಿ) ಓದಿದೆ. ಚೆನ್ನಾಗಿತ್ತು ಸರ್.
    ಬರೆಯುತ್ತಿರಿ
    ಸ್ವರ್ಣಾ

    ReplyDelete