Monday 26 March 2012

ಎನ್ನ ಮನದಾಸೆ.



ಬಾನ ಅಂಗಳದಲ್ಲಿ ಬಾನಾಡಿ ಕಂಡಾಗ
ಗರಿಗೆದರಿ ಹಾರುವಾ ಮನಸಾಯ್ತು ಎನಗೆ

ಜಲಧಿಯಾ ಗರ್ಭದಲಿ ನುಲಿವ ಮೀನಿನ ಗತಿ
ಎನಗಿರಬಾರದೆ ಎನ್ನಿಸಿತು ಮನಕೆ

ಗಾಳಿ ತುಯ್ದಾಟಕ್ಕೆ ತೂಗಿ ನಲಿದಾಡುವ
ಗಿಡವಾಗಿ ಬೇರೂರಬೇಕೆನ್ನುವಾಸೆ

ತಾಯಮಡಿಲಲ್ಲಿ ಕುಣಿದು ನಲಿದಾಡುವಾ
ಕೂಸಕಂಡಾಗ ಮತ್ತೆ ಗರ್ಭಹೊಗುವಾಸೆ

ಹುಚ್ಚುಮನಸಿನ ಭಾವ ಹತ್ತು ಕಡೆ ಹರಿದಿರಲು
ಬರಬಾರದೇ ಎನಗೆ ನಾನಾಗುವಾಸೆ

ನಾನಾಗುವಾಸೆ ನಾನಾಗುವಾಸೆ

No comments:

Post a Comment