Friday 17 August 2018

ಬದುಕ ನೀಡಿದವನೆ ಕೇಳು




ಬದುಕ ನೀಡಿದವನೆ ಕೇಳು
ನಿನ್ನ ಜಗವಿಂದು ಸಾಕಾಗಿದೆ
ನಾ ಜೀವಂತ ಸತ್ತಾಗಿದೇssssss ಬದುಕ ।

ಇರುಳು ಸರಿಯುವುದಿಲ್ಲ
ಹಗಲು ಹೋಗುವುದಿಲ್ಲ
ನೀನಿತ್ತ ಗಾಯವದು
ಮಾಗುವುದಿಲ್ಲಾ
ಕಣ್ಣು ಸೊರಗಿದೆಯೀಗ
ಮನವು ಮುದುಡಿದೆ ಈಗ
ದುಃಖದಾ ಮಡುವಾಗಿದೆ
ಮೋಡಿಯೊಂದನು ಮಾಡಿಹೆಯಲ್ಲಾ ।ಬದುಕ ।

ಕಸಿದೆ ನೀ ಎನ್ನ ಸುಖವನನ್ಯಾಯದಿಂದ
ಜೀವಂತವಿಟ್ಟೆನ್ನ ಜೀವನವ ಕಸಿದೇssssss
ಹತ್ಯೆಗೈದಿಹೆ ಹೃದಯ
ಮೌನವೆಂತಿಹುದಯ್ಯ
ಹೇಳುವೆ ಕೇಳಯ್ಯಾ
ಎನ್ನ ಸುಖದಿಂದ ನೀ ಹೆದರಿದೆಯಾ ।ಬದುಕ|

2 comments:

  1. 'ಎನ್ನ ಸುಖದಿಂದ ನೀ ಹೆದರಿದೆಯಾ' ಎಂಬ ತಮ್ಮ ನೋವು ತುಂಬಿದ ಉಪ ಸಂಹಾರದಂತೆ, ಈಗ ಈ ವೇದನೆಯು ಸಕಾಲಿಕವಾಗಿದೆ ಮಾನ್ಯರೇ! ಉಕ್ಕಿ ಹರಿದಿದೆ ನೀರು - ಕೊಚ್ಚಿ ಹೋಗಿವೆ ಜನರು ಕಟ್ಟಿಕೊಂಡ ಪುಟ್ಟ ಬದುಕುಗಳು.

    ಭಗವಂತ ಏಕಿಂತ ಆಕ್ರೋಶವು‌ ನಿಮಗೆ? 🙁

    ReplyDelete
    Replies
    1. ಧನ್ಯವಾದಗಳು ಬದರೀ. ನಿಮ್ಮ ಮನಸ್ಸಿನಲ್ಲಿ ನಾವಿನ್ನೂ ಇದ್ದೀವಲ್ಲ ಎನ್ನುವುದೇ ಒಂದು ಸಂತೋಷದ ವಿಚಾರ

      Delete