Monday 16 March 2015

ಏನು ಮಾಡಿದರೇನು

ಏನು ಮಾಡಿದರೇನು
ಭವ ಬೀಜವ ಸುಡದೆ
ಭಾವದಲಿ ಬಂದರೇನು
ಬದುಕಿನಲಿ ಬರದೆ

ಹೊತ್ತು
 
ತಂದದ್ದಷ್ಟು
ಗಳಿಸಿಕೊಂಡದ್ದಷ್ಟು
ಗುಣಿಸಿ ಭಾಗಿಸಿ ಕಡೆಗೆ
ಉಳಿಸಿಕೊಂಡದ್ದಷ್ಟು  


ಕೋಪತಾಪದ ಮೂಲ 
ಕರ್ಮಶೇಷದಾ ಜಾಲ 
ಸರ್ಪದೊಲು ಸುತ್ತಿಹುದು 
ಧೀ,ಮನಗಳನು ಮುತ್ತಿಹುದು 

ಕಡೆಯವರೆಗೂ ಬಿಡದು
ಧರಣಿಯ ಸೊಗಡು
ಅಂತ್ಯದಾಚೆಗೂ ಬಂದು
ಮತ್ತೆ ಚಿಗುರಲಿಹುದು

ಸುಡಬೇಕು ಗುಣವನ್ನು 
ಚಿಗುರುವಾ ಕಣವನ್ನು 
ಗುಣರಾಹಿತ್ಯವೇ ಪರಮಾರ್ಥ 
ನಿರ್ಗುಣವೇ ಸುಗುಣ 



ರವಿ ತಿರುಮಲೈ 
೧೭.೦೩.೨೦೧೫

2 comments:

  1. ನನ್ನಂತ ಅಲ್ಪಮತಿಗಳಿಗೂ ಅರಿವಾಗುವ ಮಟ್ಟಿಗೆ ಮನೋ ಶುದ್ಧೀಕರಣ ಔಷಧ ರೂಪದ ಕವನ.
    ನಿರ್ಗುಣವೇ ಸುಗುಣ, ಎಂಬುದು ಪರಿಪಕ್ವತೆಯ ನಿಜ ಸಂಕೇತ.

    ಪದ ಲಾಲಿತ್ಯ ಮತ್ತು ಸರಳತೆಯೇ ಮೈವೆತ್ತಂತಹ ಕವನ.

    ReplyDelete
  2. This comment has been removed by the author.

    ReplyDelete