Monday 24 March 2014

ಹರಸಿರೆನ್ನನು

ನನ್ನ ಹುಟ್ಟುಹಬ್ಬದಂದು ನನ್ನ ಮಿತ್ರರಲ್ಲಿ 'ಹರಸಿ' ರೆಂದು ಬೇಡಿದ ಪರಿ ಹೀಗಿತ್ತು 


=============================
ಹರಸಿರೆನ್ನನು 
=============================


ಹರಸಿರೆನ್ನನು ಇಂದು 

ನೂರ್ಕಾಲ ಬಾಳೆಂದು

ಆ ನಿಮ್ಮ ಹರಕೆಯೆಲ್ಲವು

ಸಫಲವಾಗಲೆಂದು. 



ಸವೆಸಿ ಬಂದಿಹೆ ನಾನು 

೫೯  ವಸಂತಗಳನು 

ಶೇಷವೆಷ್ಟೋ ನಾ ಅರಿಯೆ 

ಕ್ಲೇಶವೆಷ್ಟೋ ಅದ ಸವೆಯೆ 



ಕಷ್ಟಸುಖಗಳ ಮಿಶ್ರಣದಿಂ ಕಳೆದೆ 

ಅನುಭವದ ಸಾರದಿಂ ನಾ ಬೆಳೆದೆ 

ಏರು ತಗ್ಗುಗಳ ನಾ ದಾಟಿ ಬಂದೆ 

ಸೋಲುಗೆಲುವುಗಳ ನಾ ಮೆಟ್ಟಿನಿಂದೆ 



ಪ್ರೀತಿ ಪ್ರೇಮಗಳನೆಷ್ಟು ಸವಿದೆನೋ 

ದ್ವೇಷಾಸೂಯೆಗಳನೆಷ್ಟು ಸಹಿಸಿದೆನೋ 

ಗತವೆನೆಲ್ಲವ ಮರೆತು ಬಾಳಬೇಕೆಂದಿಹೆನು 

ಇಂದೇ ನಿಜ ಇದುವೇ ಸುಖ ಎಂದು ನಂಬಿಹೆನು 



ನಿಮ್ಮೊಲವು ಪ್ರೀತಿಯೇ ಜೀವಸತ್ವವು ಎನಗೆ 

ನಿಮ್ಮಂತರಂಗದಲಿ ತಾವು ಕೊಡಿರೆನಗೆ

ಮಾಸದಿರಲಿ ನೆನಪೆನ್ನ ನಿಮ್ಮ ನೆನಪಿನೊಳಗೆ 

ನಾ ನಿಮ್ಮ ದಾಸ ಎನ್ನ ಕೊನೆಯುಸಿರಿನವರೆಗೆ   


ರವಿ ತಿರುಮಲೈ 
೨೧.03.೨೦೧೪

3 comments:

  1. ಸತ್ಪುರಷರ ಸತ್ಸಂಗದಿ ಪಾವನವಾಗಿಹೆವು ನಾವೆಲ್ಲ.
    ಕಗ್ಗರಸಧಾರೆ, ಚೆನ್ನುಡಿ ಮತ್ತು ದಾಸಾನುದಾಸ ಉಣಬಡಿಸುವ ತಾವು ಶತಾಯುಷಿಯಾಗುವಿರಿ ನಮಗೆ ದಾರಿ ದೀಪವಾಗಿ.

    ReplyDelete
  2. ರವಿ ತಿರುಮಲೈ ರವರ *ಹರಸಿರೆನ್ನನು* ಕಾವ್ಯ ಅರ್ಥಗರ್ಭಿತವಾಗಿದೆ

    ReplyDelete
  3. ರವಿ ತಿರುಮಲೈ ರವರ *ಹರಸಿರೆನ್ನನು* ಕಾವ್ಯ ಅರ್ಥಗರ್ಭಿತವಾಗಿದೆ

    ReplyDelete