Monday, 24 March 2014

ದುರಿತಗಳಾ ಹರಿಸೋ


ದುರಿತಗಳಾ ಹರಿಸೋ ಶ್ರೀ ಹರಿ 
ಅರಿಯದಾಗಿಹೆ ದಾರಿ ನಾ \ ದುರಿತ\

ಆವ ಕರ್ಮದಿ ಆವ ಪಾಪವೋ
ಆವ ಕರ್ಮದಿ ಆವ ಪುಣ್ಯವೋ
ಪರಿಯನರಿಯದೆ ಪರಿತಪಿಸಿಹೆ
ದಾರಿತೊರೋ ಅರಿಗಳರಿಯೇ \ ದುರಿತ\

ಸುರರಿಗಮೃತವ ಸುರಿದು ಪೊರೆಯುತ
ನರೆಯನೆರೆದಿಹೆ ನರರಿಗೇತಕೋ
ಚರದಿ ಮೆರೆಸುವ ಹರಿವನಿರಿಸಿದೆ
ಸ್ಥಿರವ ಮರೆಸುವ ಪರಿಯಿದೇತಕೋ \ದುರಿತ\

ಮೂರು ಜನುಮದಿ ದ್ವಾರಪಾಲರ
ವೈರಿಯಂದದಿ ಹರಿದೆ ಶಾಪವ
ಶಿರದಿಯಿರಿಸುತ ಚರಣಕಮಲವ
ಪೊರೆದೆ ಬಲಿಯನು ವರವ ಕರುಣಿಸಿ \ದುರಿತ\

ಅರಳಿ ನಿಲ್ಲೋ ಹರಿಯೆ ಹೃದಯದಿ
ಅರಿವನಿರಿಸೋ ಗರುವ ಮುರಿಯುತ 

ಮರಳಿ ಜನನವು ಬಾರದಿರುವಾ

ಪರಮಪದವನು ತೋರಿ ಹರಸೋ \ ದುರಿತ\
 


ಸಾಗರದ ಶ್ರೀ ನಂಜುಂಡ ಭಟ್ಟರ ಕೃಪೆಯಿಂದ 
ರವಿ ತಿರುಮಲೈ


1 comment:

  1. ಕೃತಿ ಬಹಳ ಸೊಗಸಾಗಿದೆ.
    ಒಂದು ಅಂಕಿತ ನಾಮವಿದ್ದರೆ ಇನ್ನೂ ಮೆರಗು ಇರುತ್ತಿತ್ತು.

    ReplyDelete