Thursday 12 December 2013

ಪ್ರಾರ್ಥನೆ

ನಿನ್ನ ಭಾವ
ಎನ್ನ ಭಕ್ತಿ
ಮುನ್ನ ಅರಿಯದಾದೆನು

ಹೊನ್ನೆಲ್ಲವು
ಮಣ್ಣಲ್ಲವೇ
ಬೇಧ ಕಾಣದಾದೆನು

ತಡೆಯಲಾರೆ
ಕಡೆಯತನಕ
ಕರ್ಮಶೇಷದ ಹೊರೆಯನು

ತೀರದಲ್ಲಿ ನಿಂದಿಹೆನು
ಭಾರಹೊತ್ತು ಬಂದಿಹೆನು
ತೋರು ಕೃಪೆಯ ದಾತನೆ


2 comments:

  1. ಇಂತ ಅನನ್ಯ ಭಕ್ತಿಯೇ ದಾಟಿಸುವುದೆಮ್ಮ ಭವಸಾಗರ.

    ReplyDelete
    Replies
    1. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಬದರಿ

      Delete