Friday 25 May 2012


ಮೂಲವ ಸೇರುವ  ಪರದಾಟ 



ಹರಿದಾಡುವಂಥಾ ಮನವನಿತ್ತು 
ಧ್ಯಾನಿಸೆಂದರೆ ಹೇಗೋ ದೇವಾ 

ಬಗೆ ಬಗೆಯ ಚಿತ್ರ ವಿಚಿತ್ರವನಿಟ್ಟು    
ಆಸೆಯ  ಬಿಡೆಂದರೆ ಹೇಗೋ ದೇವಾ 

ಕಾಯವ ಕೊಟ್ಟು ಆಸೆಯನಿಟ್ಟು    
ಮೋಹವ ಬಿಡೆಂದರೆ ಹೇಗೋ ದೇವಾ 

ಎಲ್ಲವಕೊಟ್ಟು,  ಕಣ್ಣನೂ  ಕೊಟ್ಟು 
ನೋಡಬೇವೆಂದರೆ ಹೇಗೋ ದೇವಾ 

"ನಾನು" ತನವನಿತ್ತು ನೀ ದೂರ ಕುಳಿತು 
ನಿನ್ನನು ಸೇರೆಂದರೆ ಹೇಗೋ ದೇವಾ 

ಅರಿವನು ಇತ್ತು ಮೂರ್ಖತೆಯನೂ ಕೊಟ್ಟು 
ಮುಕ್ತನಾಗೆಂದರೆ ಹೇಗೋ ದೇವಾ 

ದಾರಿಯಕೊಟ್ಟು  ಮಾರ್ಗವ ತೋರಿ 
ಮುಕ್ತನಾಗಿಸಲು ಬೇಗ ಬಾರೋ ದೇವಾ 

1 comment:

  1. ಗುರಿಯನ್ನೂ ಕೊಟ್ಟ ಭಗವಂತ ಜೊತೆಗೆ ಮನೋ ಚಂಚಲತೆಯನ್ನೂ ಇತ್ತು ಬಹಳ ತಮಾಷೆ ನೋಡ್ತಾನೆ ಎನ್ನುವುದನ್ನು ತುಂಬಾ ಸುಂದರವಾಗಿ ಬರೆದುಕೊಟ್ಟಿದ್ದೀರ.

    ReplyDelete