Sunday 2 November 2014

ನಾನೊಂದು ಆದಿ
ನಾನೊಂದು ಅಂತ್ಯ
ನಾನೇ ಜಗತ್ತು
ನಾನೇ ಶೂನ್ಯ
ನಾನೊಂದು ಕಡಲ ಜಲದ ಹನಿ
ಆದ್ಯಂತರಹಿತ ಕಡಲೇ ನಾನು

ಏಕಾಂತ ನನ್ನ ಮಿತಿ
ಒಂದು ಕ್ಷಣಕ್ಕೆ ನಾ ಸ್ಥಬ್ಧ
ನನಗಾಗಿ ನನ್ನದೇ ವ್ಯರ್ಥ ಹುಡುಕಾಟ
ನಾನಿಲ್ಲ ನಾನಿರುವೆಗಳ ನಡುವೆ
ಕಣ್ಣ ಮುಚ್ಚಾಲೆಯಾಟ
ಮೂಲೆಮೂಲೆಯಲ್ಲೂ ನನ್ನನ್ನೇ
ತುಂಬಿಕೊಳ್ಳಲು ಪರದಾಟ

ಅಸ್ಪಷ್ಟ ನೀತಿ ನಿಯಮಗಳ ನಡುವೆ
ನನ್ನ ಯೋಚನೆಗಳು ಜೀರ್ಣವಾಗದೆ
ನಿರಂತರ ಪ್ರಶ್ನೆಗಳ ಸುರಿಮಳೆ
ನಿರುತ್ತರದ ಸ್ಥಿತಿಯಲ್ಲಿ ತಲೆಬಾಗುವೆ
ನಾನಾ ಪರವಸ್ತುವಿಗೆ

ಎನ್ನ ಪದಗಳಿಂದ ನಾನಮರ
ಗೋರಿಗಳಿಂದೆದ್ದು ಕೂಗುವ
ಎನ್ನ ಪೂರ್ವಜರ ಕರೆಗಳಿಂದ,
ಬರೆಯುವುದೆನ್ನ ಹಕ್ಕು, ಧರ್ಮ

ಅಣಕವಾಡುವವರು, ಅಣಕಿಸಲಿ
ಹೊಗಳುವವರ ಗುಣಗಾನವಿರಲಿ
ವಿದ್ವಜ್ಜನರೊಪ್ಪಿಕೊಳ್ಳಲಿ, ಸೂರ್ಯನ
ಕಡೆ ಮುಖಮಾಡಿ ನಾಯಿ ಬೊಗುಳಲಿ


ನಾನೊಂದು ಆದಿ ನಾನೊಂದು ಅಂತ್ಯ



ರವಿ ತಿರುಮಲೈ 
೧. ೧೧. ೨೦೧೪

1 comment:

  1. ಸಾಹಿತಿಯ ನಿಜವಾದ ಸ್ವಗತ ಗೀತೆ ಇದು.
    ತನ್ನ ಬರವಣಿಗೆಯನು ಗುರುತಿಸಿದರೆ ಜಗವು ತನಗದರೆ ಆನಂದ. ಚಪ್ಪಾಳೆ ಇರದೆ ಅದೆಂತು ಹುರುಪು ಗಾಯಕನಿಗೂ ಅಲ್ಲವೇ ಮತ್ತೆ!

    ReplyDelete