Saturday 1 September 2012

ಮರೆತ ಮದುವೆಯ ದಿನ

ಇಂದಾಯ್ತು ವರುಷ ಇಪ್ಪತ್ತೆಂಟು 
ಬಿದ್ದು ನನಗೆ ವೈವಾಹಿಕ ಗಂಟು 
"ಮರೆತೆಯಲ್ಲ ನೀ ಅದನು" ಎಂದು 
ಹೆಂಡತಿ ತೆಗೆದಳು ಸಕತ್ತಾಗಿ ಬೆಂಡು 

ತಪ್ಪಾಯ್ತು ಮಾರಾಯ್ತಿ ಮನ್ನಿಸೆನ್ನೆಂದು 
ಗೋಗರೆದು ಕೈಮುಗಿದು ಬೇಡಿದರು ಇಂದು 
ಗಂಟು ಕಟ್ಟಿದ ಮುಖ ತಿಳಿಯಾಗಲಿಲ್ಲಿನ್ನು 
ಪೂಸಿಹೊಡೆಯುವ ಪರಿ ಅರಿಯದಾದೆನಿನ್ನು 

ಹಿಂದೆಲ್ಲ ಮಕ್ಕಳ ಮಧ್ಯಸ್ಥಿಕೆಯೊಂದಿತ್ತು 
ಸ್ವಲ್ಪ ಸಮಯದ ನಂತರ ಸರಿಹೋಗುತ್ತಿತ್ತು 
ಮಗನೊಬ್ಬ ಗಡಿದಾಟಿ ಹೋಗಿರುವನು ಹಾರಿ 
ಮಗಳಂತೂ ಸೇರಿದಳು ಮೈಸೂರ ರೈಲನೇರಿ

ಉಂಟು ನನಗವಳು ಅವಳಿಗೆ ನಾನು 
ಸರಿಮಾಡಬೇಕು ಸ್ಥಿತಿ, ಏನಾದರೇನು 
ಬಿಗಿತವನು ಸಡಿಲಿಸಲು ಉಪಾಯವೇನು 
ಶರಣೆನ್ನದೆ ಕಾಣೆ ಬೇರೆ ದಾರಿಯೇನು. 

ಸಹೃದಯ ಮಿತ್ರರೇ ಶುಭವೆನಗೆ ಕೋರಿರಿ
ನಮ್ಮಿಬ್ಬರ ಬಾಳ್ವೆ ಹಸನಾಗಲೆಂದು 
ಶೇಷ ಜೀವನವೆಲ್ಲ ನಸು ನಗಲಿ ಎಂದು 
ಕಡೆಯ ತನಕ ನಾವು ಹಾಗೆ ಇರಲೆಂದು. 

ರವಿ ತಿರುಮಲೈ

1 comment:

  1. ನೂರ್ಕಾಲ ಸಂತಸವಷ್ಟೇ ಸವಿಯುತ್ತಾ ಆರೋಗ್ಯವಾಗಿರಿ ಎಂದು ಹಾರೈಸುತ್ತೇವೆ.

    ಅಂತೂ ನಿಮಗೂ ಬೆಂಡು ಎತ್ತಿದರಲ್ಲಾ ಮೇಡಂ ಅವರಿಗೆ ನಮ್ಮ ಅಭಿನಂದನೆಗಳು.

    ReplyDelete