Sunday 8 April 2012




ಪ್ರೇಯಸಿಗೊಂದು ಭಿನ್ನಹ


ದೂರ ನಿಂತು ಮಾತನಾಡದಿರು
ನೀ ಬಾ ಹತ್ತಿರಕೆ!
ಇಂದು ವಶದೊಳಿಲ್ಲ ಮನದ ಭಾವ
ನೀ ಬಾ ಹತ್ತಿರಕೆ!!

ಒಂದು ಯುಗದಿಂದ
ಆಸೆ ತುಂಬಿಹುದು
ನಿನ್ನ ಸೇರಲೂ,(೨)     

ಚಂದ್ರ ಚೆಲ್ಲಿಹ ಬೆಳಕು
ಇರುಳ ಬೆಳಗಿಹುದು
ನೀ ಬಾ ಹತ್ತಿರಕೆ !!! " ದೂರ ನಿಂತು "

ಮಂದ ಮಾರುತವಿಂದು
ಹೊತ್ತು ತಂದಿದೆ ಸಕಲ
ಸುಮಗಳಾ ಘಮಲಾ (೨)
ಕಳೆದುಹೋದರೆ ಇರುಳು
ಮತ್ತೆಂದು ಬರದು
ನೀ ಬಾ ಹತ್ತಿರಕೆ!!! "ದೂರ ನಿಂತು "

ಕಂಡ ಕನಸುಗಳೆಲ್ಲ
ನನಸಾಗುವ ಕಾಲ
ಸಂದಿದೇ ಇಂದು (೨)
ಒಂದಾಗುವ ಸಮಯ
ಬಂದು ನಿಂತಿದೆ ಇಂದು
ನೀ ಬಾ ಹತ್ತಿರಕೆ !!! "ದೂರ ನಿಂತು "

ರವಿ ತಿರುಮಲೈ

1 comment:

  1. ಏನ್ಸಾರ್ ಇದು ಭಾನುವಾರ ಸಿಕ್ಸರ್ರು. is it a ದಾಂಪತ್ಯ ಗೀತೆ or ಪ್ರೇಮಿಗೆ ಗೀತೆ. ಒಟ್ಟಾರೆ ಬಿನ್ನಹಕ್ಕೆ ಆಕೆ ಖಂಡಿತ ಕರಗಿ ಹೋಗುವರು.

    ReplyDelete