ಆ ಭಾವ
( ಇಂದು ಅಭಾವ)
ಅಂದೆಂದೋ ಕಂಡಿದ್ದೆ
ನೀ ಎನ್ನ ಮೊದಲಬಾರಿಗೆ
ಇಂದು ಕೂಡ ಆ ಭಾವ
ಜೀವಂತ ನನ್ನ ಮನದೊಳಗೆ
ಇಂದೂ ಸಹ ಮೂಡುವುದು
ಕಿರುನಗೆ ನನ್ನದರಗಳಲ್ಲಿ
ದೂರದಿಂದ ನೀ ನಕ್ಕಾಗ
ಅಂದು ಕೆಲಕ್ಷಣ ಎನ್ನ ಕಂಡು
ನಿನ್ನ ಮೊದಲ ಸ್ಪರ್ಶ
ನನ್ನಲ್ಲಿ ನೆನೆಪಾದಾಗ
ಇಂದೂ ಸಹ ಬಡಿಯುವುದು
ವೇಗದಿ ಎನ್ನ ಹೃದಯ
ನೀನಿಂದು ಸನಿಹದಲಿ
ಇಲ್ಲದಿದ್ದರೆ ಏನಾಯ್ತು
ಇನ್ನೂ ಸಹ ಜೀವಂತ
ನಿನ್ನ ಭಾವವೆನ್ನ ಹೃದಯದಲಿ.
ರವಿ ತಿರುಮಲೈ
No comments:
Post a Comment