ಗೋಕುಲದಲ್ಲಿ ಶ್ರೀ ಕೃಷ್ಣ ಎಲ್ಲರ ಮನಸ್ಸನ್ನೂ ಆವರಸಿಕೊಂಡಿರುವವನು. ಎಲ್ಲರೂ ತಾವು ಕೃಷ್ಣನ ಸಂಗಡ ಇರಬೇಕೆಂದುಕೊಳ್ಳುವವರು. ಒಂದು ಗಳಿಗೆಯೂ ಅವನಿಂದ ದೂರ ಇರಲಾರರು. ಆದರೆ ಮೂರ್ತ ರೂಪದಲ್ಲಿ ಅವನು ಅವರೊಡನೆ ಇಲ್ಲದಾಗ, ಅವನೊಡನೆ ಇರುವ ಭಾವವೇ ಅವರಿಗೆ ಆನಂದ ಕೊಡುತ್ತಿತ್ತು. ಹಾಗೆ ತನ್ನ ಸಂಗಡವೇ ಕೃಷ್ಣನಿದ್ದಾನೆ ಅಥವಾ ತಾನು ಅವನೊಡನಿದ್ದೇನೆ ಎನ್ನುವ ಒಂದು ತನ್ಮಯ ಭಾವ ಅವರಲ್ಲಿ ಇರುತಿತ್ತು.ಅಂಥಹ ಒಂದು ತನ್ಮಯ ಭಾವದ ಮನಸ್ಸಿನ ರೂಪವನ್ನು ತನ್ನ ಸಖಿಗೆ ಅರುಹುವುದೇ ಈ ತನ್ಮಯತೆ.

ನೋಡೇ ಸಖೀ ಮೂಕಳಾಗಿಹೆ ನಾ
ಮಾಧವನಾ ಮೋಹನ ರೂಪವ ಕಂಡು " ನೋಡೇ ಸಖೀ"
ಅವನ ಲೀಲೆಯ ಕೇಳಿ
ಅವನ ಮೋಹದಿ ತೇಲಿ
ಅವನೊಡನಿರುವಂಥಾ
ಭಾವದೊಳಿರುವಾಗ " ನೋಡೇ ಸಖೀ"
ನಯನದೊಳು ಅವನಿರಲು
ಮನದೊಳಗೆ ತುಂಬಿರಲು
ಮುರಳೀಗಾನವ
ನಾನಾಲಿಸುತಿರುವಾಗ " ನೋಡೇ ಸಖೀ"
ಹುಣ್ಣಿಮೆಯ ಸಂಜೆಯಲಿ
ಯಮುನಾ ತೀರದಲೀ
ರಂಗನಾ ಸಂಗದಲಿ
ಎನ್ನ ನಾ ನೆನೆವಾಗ " ನೋಡೇ ಸಖೀ"
ನಂದ ನಂದನಂದನನೆನಗೆ
ನಲುಮೆಯನು ತೋರಿರಲೂ
ತನುಮನದಲವನೊಲುಮೆ
ಜೇನಂತೆ ಸುರಿವಾಗ " ನೋಡೇ ಸಖೀ"
ರವಿ ತಿರುಮಲೈ
ರವಿ ತಿರುಮಲೈ
ರವಿಯಣ್ಣಾ, ಚೆನ್ನಾಗಿದೆ ..
ReplyDeleteಸ್ವಲ್ಪ ಆದಿಪ್ರಾಸದ ಪ್ರಯೋಗ ಮಾಡಿದರೆ ಇನ್ನೂ ಸೊಗಸಾಗಿರುತ್ತದೆ ಎಂದು ನನ್ನ ಭಾವನೆ. ಹಾಡುವಾಗ ಇಂತಹ ಪ್ರಾಸ ಸಹಕರಿಸುತ್ತದೆ ಎಂದು ನನ್ನ ಅಭಿಪ್ರಾಯ.
ಧನ್ಯವಾದಗಳು.
ತಾವು ಹೇಳುವ ಬಾವ ಇಂದಿಗೂ ಕೂಡಾ ಪ್ರಸ್ತುತ. ವ್ರಜ ಮಂಡಲದಲ್ಲಿ ನಡೆದಾದಿದಾಗಲೇ ನಮಗೆ ಅವ್ಯಕ್ತನಾದ ಕೃಷ್ಣನ ಅನುಭವ ವಾಗುತ್ತದೆ. ಆದಿ ಪ್ರಾಸ ಬಳಸಿದ್ದಾರೆ ಮಾತ್ರೆಯಲ್ಲಿ ಸ್ವಲ್ಪವೇ ವ್ಯತ್ಯಾಸ ಇದೆ ಅಷ್ಟೇ ಇಲ್ಲಿ
ReplyDeleteನಯನದೊಳು ಅವನಿರಲು - ನಯನದೊಳವನಿರಲು
ಮನದೊಳಗೆ ತುಂಬಿರಲು - ಮನನದೊಳ್ತುಮ್ಬಿರಲು
ಮುರಳೀಗಾನವ -ಮುರಲಿಗಾನವ ನಾನು
ನಾನಾಲಿಸುತಿರುವಾಗ -ಆಲಿಸುತಿರುವಾಗ ........ ನೋಡೇ ....
ಇಲ್ಲಿ ಮೊದಲಿನೆರಡು ಸಾಲು ಆದಿ ಮತ್ತು ಅಂತ್ಯ ಪ್ರಾಸಗಳಿವೆ . ಕೊನೆಯ ಎರಡು ಸಾಲು ಹಾಡಲು ಅನುಕೂಲವಾಗುವಂತೆ ಮಾಡಿಕೊಳ್ಳ ಬಹುದು ನಮ್ಮ ಮಾನ್ಯ ರವಿಯವರು ಗೀತೆ ರಚಿಸಿದರೆ ಆಗ ನಾವು ದ್ವಪರಕ್ಕೆ ಹೋಗಿ ಆಗಿನ ಭಾವವನ್ನು ಪ್ರಕಟಿಸುವಂತೆ ಹಾಡಿದಾಗ ಸಾಕ್ಷಾತ್ ಕೃಷ್ಣನೇ ಪ್ರತ್ಯಕ್ಷ ನಾಗುತ್ತಾನೆ
ರಾಧೆಯ ಒಲುಮೆಯ ಸಿರಿಯ ಕಂಡು ಮನ ತುಂಬಿ ಬಂತು.
ReplyDelete