
ಗಿರಿ ಶಿಖರ ಸುತ್ತಿಹರು
ಮರಗಿಡವ ಮುತ್ತಿಹರು
ಅಂತರಂಗದಿ ದೈವವ
ಕಾಣದಾ ಗಾವಿಲರು
ಹೆಸರು ಸಾವಿರಾರು
ರೂಪ ನೂರ ಕೊಟ್ಟಿಹರು
ಇಲ್ಲದಾ ಆಕಾರ ಕಾಣ್ಬ
ಹಂಬಲದ ಹುಚ್ಚರಿವರು
ಹಲವು ಆಚಾರಗಳ
ಬಲವಂತರಿವರು
ಕೆಲವು ನಂಬಿಕೆಗಳ
ಗುಣವಂತರಿವರು
ವರ್ಣನೆಗೆ ಪರಿ ಪರಿಯ
ಪುರಾಣಗಳ ಕಟ್ಟಿಹರು
ವರ್ಣನಾತೀತನನು
ಅಮಿತ ವರ್ಣಿಸಿಹರು
ನಂಬಿಕೆಗೆ ತಲೆತೋಕೆಗಳಿಲ್ಲ
ಹುಂಬತನಕೆ ಕೊನೆಮೊದಲಿಲ್ಲ
ತಮ್ಮ ಕೂಪವ ತಾವೇ ತೋಡಿ
ಸುಮ್ಮನಿಹ ದೈವವನು
ಹಳಿದು ದೂರುತಿಹರು
ಅಂತರಂಗದಿ ದೈವವ
ಕಾಣದಾ ಗಾವಿಲರು
ರವಿ ತಿರುಮಲೈ
ಹಾಲು ಕರೆಯಲು ಬರದಿದ್ದರೆ ಕೆಚ್ಚಲನ್ನು ದೂರುವುದಾಗಬಾರದು, ಅಥವಾ ಹಸುವಿಗೆ ಹೊಡೆಯುವುದಾಗಬಾರದು ನಮ್ಮ ದೃಷ್ಟಿಕೋನ. 'ಕಾಲು ಮಡಚಿ ಕೂತು' ಹಾಲು ಕರೆಯುವುದನ್ನು ಕಲಿಯಬೇಕಾದವನು ನಾನು. ಮೊತ್ತಮೊದಲು 'ನಾನು' ಸರಿಯಾಗದ ಹೊರತು 'ಸಮಾಜ' ಸರಿಯಾಗುವುದಿಲ್ಲ. ನನ್ನ ಹೆಡ್ಡತನಕ್ಕೆ ಅನ್ಯರನು ದೂರಿ ಫಲವೇನು? ಹಾಲು ಬಂದೀತೇ ಕೆಚ್ಚಲಿಂದ ಉಕ್ಕಿ?
ReplyDeleteನಾಲ್ಕೈದು ಸಲ ಓದಬೇಕಾಯ್ತು ನಾನು ಹೆಡ್ಡನಾದುದರಿಂದ. ಮತ್ತೊಂದೆರಡು ಸಲ ಓದುವೆ ಈ ರಚನೆಯನ್ನು ಅಂತರಂಗಕ್ಕೆ ಹೊಕ್ಕಬಹುದೇನೋ ನೋಡೋಣ.