![]() |
ಶುಭವಾಗಲೆಂದು ಹರಸು ಓ ಶುಭವೆ
ನಿನ್ನ ಹಾರೈಕೆಯು ನೀಡಿ ಎನಗೆ ಶುಭವ
ಅಶುಭವಳಿಯೆ ಶುಭವಿಂದು ಹೊಳೆಯೆ
ದಿನವೆಲ್ಲ ಮಂಗಳದಿ ಕಳೆಯೆ
ಶುಭವಾಗಲೆಂದು ಹರಸು ಓ ಶುಭವೆ
ಶುಭವಾಗಲೆಂದು ಹರಸು ಓ ಶುಭವೆ
ಮನದ ಕಷ್ಮಲವನು ತೊಳೆದು
ಸತ್ವದ ಜ್ಞಾನವದು ಬೆಳೆದು
ತತ್ವವದು ಬೆಳಕಾಗಿ ಹೊಳೆದು
ನಾನೆತ್ತರಕೆ ಬೆಳೆದು ಬಾಳುವಂತೆ
ಶುಭವಾಗಲೆಂದು ಹರಸು ಓ ಶುಭವೆ
ಶುಭವಾಗಲೆಂದು ಹರಸು ಓ ಶುಭವೆ
ಕೊರಗುವಾ ಮನವಿಂದು ತಿಳಿಯಾಗಲೆಂದು
ದ್ವೇಷಾಸೂಯೆಗಳು ಅಳಿಯಲೆಂದು
ಪ್ರೇಮಾಭಿಮಾನಗಳು ಬೆಳೆಯಲೆಂದು
ಎಲ್ಲರೊಳು ಒಂದಾಗಿ, ನಾ ಬಾಳಲೆಂದು
ಶುಭವಾಗಲೆಂದು ಹರಸು ಓ ಶುಭವೆ
ಶುಭವಾಗಲೆಂದು ಹರಸು ಓ ಪ್ರಭುವೇ.
ರವಿ ತಿರುಮಲೈ
ಇದು ಬೆಳಗನ್ನು ಆರಂಭಿಸಲು ಒಳ್ಳೆಯ ಪ್ರಾರ್ಥನಾ ಗೀತೆ.
ReplyDelete"ಒಳ್ಳೆಯದಾಗಲಿ..." ಎಂದು ಹರಸುವವರೇ ಬರಬಿದ್ದ ಈ ಕಲಿಗಾಲದಲ್ಲಿ, ನಿಮ್ಮ ಶುಭಾಶಯಕೆ ಶರಣು.