
ಎಲ್ಲೆಲ್ಲಿಯೂ ಇರುವ ನಿನ್ನ
ಕಾಣಲಾಗದೆ ನಾ
ಎಲ್ಲೆಲ್ಲೋ ಹುಡುಕಿದೆ
ಎಲ್ಲೆಗಳೇ ಇಲ್ಲದ ನಿನ್ನ
ಇಲ್ಲಿ, ಅಲ್ಲಿ, ಮತ್ತೆಲ್ಲೆಲ್ಲೋ
ಹುಡುಕುತ್ತಾ ಪರದಾಡಿದೆ.
ನನ್ನಲ್ಲೇ ನೀನಿರುವೆ,
ನಿನ್ನಲ್ಲೇ ನಾನಿರುವೆ ಎಂದು
ನಾ ಅರಿಯದಾದೆ
ಕವಿದಿರುವ ಪೊರೆಯನ್ನು
ಮುಸುಕಿರುವ ಧೂಳನ್ನು
ನಾ ಒರೆಸದಾದೆ.
ಹರಿಯೇ,
ಹರಿದುಬಿಡು ನನ್ನಜ್ಞಾನವನು
ಸುರಿದುವಿಡು ಸುಜ್ಞಾನವನು
ದ್ವಂದ್ವವಿಲ್ಲದ ದೃಷ್ಟಿ
ಬೇಧವಿಲ್ಲದ ಬದುಕ
ನೀಡಿ ಕಾಯೋ
ಕೈವಲ್ಯಾಧಿಪತಿಯೇ
- ರವಿ ತಿರುಮಲೈ