Friday, 27 February 2015

ಸುಟ್ಟುಬಿಡು ಭಗವಂತ




ಸುಟ್ಟುಬಿಡು ಭಗವಂತ 
ಚಟ್ಟಕೇರುವ ಮುನ್ನ 
ಶೇಷರಹಿತವಾಗಿ 
ವಿಷಯಾಸಕ್ತಿಗಳನ್ನ 


ಬಿಡಿಸಿಬಿಡು ಭಗವಂತ 
ಅಡಿಗಡಿಗೆ ತೊಡರುವ 
ಭವಬಂಧದ ಲತೆಗಳ 
ಲವಲೇಶವಿರದಂತೆ 


ಕೊಟ್ಟುಬಿಡು ಭಗವಂತ 
ನೆಟ್ಟಗೆ ನಿನ್ನನರಿಯಲೆನಗೆ 
ಸೊಟ್ಟ ನಡಿಗೆಯ ತೊರೆದು 
ದಿಟ್ಟ ನಡಿಗೆಯ ದಾರಿ 


ಜನ್ಮದಂತ್ಯಕೆ ಬಂದು ನೀನೇ ನೆಲೆಸು 
ಹೃನ್ಮನಗಳಲಿ ನೀನೇ ಚಲಿಸು 
ನಾನೆಂಬುವ ಅಹಮನಳಿಸಿ 
'ನೀನೇ' ಎಂಬ ಭಾವವ ನಿಲಿಸು. 


ಚಟ್ಟಕೇರುವ ಮುನ್ನ ಓ ಭಗವಂತ, ಚಟ್ಟಕೇರುವ ಮುನ್ನ................