Saturday, 13 April 2013

ಹೀಗೂ ಒಂದು ಕವಿತೆ

ನಿನ್ನ ಒಲುಮೆಗಾಗಿ 

ಎಷ್ಟು ದಿನ ಕಾದರು 
ಬೀಸದದು ತಂಬೆಲರು 
ಬಿರಿ ವಿರಹದ ನಿಟ್ಟುಸಿರು   

ಅರಿಯದಾದೆ ನೀ ಎನ್ನೊಲವ 
ತೋರದಾದೆ ಬಗಿದು ನಾ ಎನ್ನ ಮನವ 

ಕಾಣಲಾದರೆ ನೀ ನೋಡು ಇಣುಕಿ 
ಅಂತರಂಗದಿ  ಅಡಗಿಹುದು ವಿರಹದಾ ಬೆಂಕಿ  

ನಿನ್ನ ದಾರಿಯ ತುಳಿಯಲು ನಾ ಸಿದ್ಧನಿದ್ದೆ 
ನಿನ್ನೊಂದು 'ಸರಿ'ಕಾರಕ್ಕೆ ಬಲಿಯಾಯ್ತು ನಿದ್ದೆ 

ನಿನ್ನ ನೆನಪಲಿ ವರುಷಗಳೇ ಸರಿದಿವೆ 
ನಿನ್ನೊಡನಾಟದಾ ನೆನಪುಗಳೇ ಸುರಿದಿವೆ 

ಬರುವೆಯೋ ಇಲ್ಲವೋ ತಿಳಿಯುವುದು ಹೇಗೆ 
ಸೇರೆನ್ನ ಸನಿಹವಾ ತಾಳಲಾರೆನು ಬೇಗೆ 



ರವಿ ತಿರುಮಲೈ